Thursday, April 23, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಸಂಸ್ಕೃತ ಭಾರತೀ ಹಾಗೂ ದೇವಾಲಯ ಸಂವರ್ಧನ ಸಮಿತಿ ವತಿಯಿಂದ ಲಯನ್ಸ್ ಕ್ಲಬ್ ಸಹಕಾರದೊಂದಿಗೆ 10 ದಿನಗಳ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ -ಕಹಳೆ ನ್ಯೂಸ್

ಪುತ್ತೂರು : ಪ್ರಾಚೀನವೂ ಪ್ರಸಿದ್ಧವು ಆದ ಸಂಸ್ಕೃತ ಭಾಷೆಯನ್ನು ಸಂಭಾಷಣೆಯ ಮೂಲಕ ಕಲಿಯುವ ಪ್ರಯತ್ನವಾಗಿ “ಸಂಸ್ಕೃತ ಭಾರತೀ” ಎಂಬ ಅಖಿಲ ಭಾರತ ವ್ಯಾಪ್ತಿಯುಳ್ಳ ಸಂಸ್ಥೆಯು ಪುತ್ತೂರಿನಲ್ಲಿ “ದೇವಾಲಯ ಸಂವರ್ಧನಾ ಸಮಿತಿ” ಒಡಗೂಡಿ ಶಿಬಿರ ವನ್ನು ಆಯೋಜಿಸಿದೆ.ಇದು ಪುತ್ತೂರಿನ ಬೊಳುವಾರಿನಲ್ಲಿರುವ ನವನೀತಂ ಸಭಾಂಗಣ ದಲ್ಲಿ ಏಪ್ರಿಲ್ 13 ರಿಂದ ಆರಂಭಗೊಂಡು ಎಪ್ರಿಲ್ 23 ಕ್ಕೆ ಕೊನೆಗೊಂಡಿದೆ.

ಸಂಪೂರ್ಣ ಉಚಿತವಾದ ಈ ಶಿಬಿರದಲ್ಲಿ 10 ದಿನಗಳಲ್ಲಿ ಸಂಸ್ಕೃತದಲ್ಲೇ ಪದಗಳನ್ನು ಜೋಡಿಸುತ್ತಾ, ವಾಕ್ಯ ರಚಿಸಿ ಮಾತನಾಡುತ್ತಾ, ಹಾಡುತ್ತಾ, ಅಭಿನಯಿಸುತ್ತಾ, ಕಥೆ ಕಟ್ಟುತ್ತಾ ಪ್ರತಿದಿನ ಎರಡು ಗಂಟೆಗಳ ಅಭ್ಯಾಸವನ್ನು ಮಾಡಿರುತ್ತಾರೆ . ಮಕ್ಕಳು,ಹಿರಿಯರು ಜೊತೆಗೂಡಿ ಕ್ರಿಯಾಶೀಲರಾಗಿ ಕಲಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಶ್ರೀಮತಿ ಲತಾ ಅಭಿಜಿತ್ ಅವರು ಶಿಕ್ಷಕಿಯಾಗಿ ಈ ಶಿಬಿರವನ್ನು ನಡೆಸಿ ಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಏಪ್ರಿಲ್ 23 ರಂದು ಬೆಳಗ್ಗೆ 10 ಗಂಟೆಯಿಂದ ಈ ಶಿಬಿರದ ಸಮಾರೋಪ ಕಾರ್ಯಕ್ರಮವು ನಡೆಯಿತು.
ಮೊದಲಿಗೆ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ನಿವೃತ್ತ ಬಿ. ಎಸ್. ಎನ್. ಎಲ್ ನ ಅಧಿಕಾರಿ ರಂಗನಾಥ್ ರಾವ್ ಇವರು ದೀಪೋಜ್ವಲನೆ ಮಾಡಿ ಅಥಿತಿ ಭಾಷಣ ವನ್ನು ಮಾಡಿದರು.

ವೇದಿಕೆಯಲ್ಲಿ ಅಥಿತಿಗಳಾದ ಹಿಂದೂ ಧಾರ್ಮಿಕ ಶಿಕ್ಷಣದ ಸಂಚಾಲಕರಾದ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಶುಭ ನುಡಿಗಳನ್ನಾಡಿದರು. ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ರಾವ್ ಇವರು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿ ಶ್ರೀಮತಿ ಲತಾ ಅಭಿಜಿತ್ ಅವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಸಂಪೂರ್ಣ ಸಂಸ್ಕೃತ ವ್ಯವಹಾರದಲ್ಲೇ ನಡೆಯಿತು.ಮಕ್ಕಳು, ಹೆತ್ತವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಕೊನೆಗೆ ಶಿಕ್ಷಕಿ ಶ್ರೀ ಮತಿ ಲತಾ ಅಭಿಜಿತ್ ಎಲ್ಲರಿಗೂ ವಂದಿಸಿದರು.