Thursday, April 23, 2026
ಜಿಲ್ಲೆಬಳ್ಳಾರಿಸುದ್ದಿ

ಏಕಾಏಕಿ 2 ಸಿಲಿಂಡರ್ ಬ್ಲಾಸ್ಟ್ :ಹೊತ್ತಿ ಉರಿದ ಹೋಟೆಲ್, ಬಾಲಕನಿಗೆ ಗಂಭೀರ ಗಾಯ -ಕಹಳೆ ನ್ಯೂಸ್

ಬಳ್ಳಾರಿ: ಹೋಟೆಲ್‌ನಲ್ಲಿದ್ದ ಎರಡು ಸಿಲಿಂಡರ್ ಏಕಾಏಕಿ ಬ್ಲಾಸ್ಟ್  ಆದ ಪರಿಣಾಮ ಹೋಟೆಲ್ ಹೊತ್ತಿ ಉರಿದ ಘಟನೆ ಬಳ್ಳಾರಿ  ಜಿಲ್ಲೆಯ ಸಿರಗುಪ್ಪ  ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.

ತೆಕ್ಕಲಕೋಟೆಯ ಈರಣ್ಣ ಎನ್ನುವವರಿಗೆ ಸೇರಿದ ಹೋಟೆಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಹೋಟೆಲ್‌ನಲ್ಲಿ ಈರಣ್ಣನ ಕುಟುಂಬಸ್ಥರು 9 ಜನ ಮಲಗಿದ್ದರು ಎನ್ನಲಾಗಿದೆ. 9 ಜನರ ಪೈಕಿ ಓರ್ವ ಬಾಲಕ ಗಾಯಗೊಂಡಿದ್ದಾನೆ. ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 10 ವರ್ಷದ ಶ್ರೀನಿವಾಸ್‌ಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಬಾಲಕನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಉಳಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.