Monday, April 27, 2026
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಕನ್ಯಾಡಿ ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಾಗೂ ಮೊಗ್ರು ಗ್ರಾಮ ಮುಗೇರಡ್ಕ -ಅಲೆಕ್ಕಿ ಶ್ರೀರಾಮ ಶಿಶುಮಂದಿರ ಮಕ್ಕಳ ಶಿಕ್ಷಣ ಮತ್ತು ಅನ್ನಯಜ್ಞ ಯೋಜನೆಗೆ ನವಜೋಡಿಗಳಿಂದ ದೇಣಿಗೆ ಹಸ್ತಾಂತರ -ಕಹಳೆ ನ್ಯೂಸ್

ಮೊಗ್ರು : ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಹೇರ ನಿವಾಸಿ, ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಕುಸುಮಾಧರ ಹಾಗೂ ಶ್ರೀಮತಿ ಪೂರ್ಣಿಮಾರವರ ಶುಭವಿವಾಹವು ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಎಪ್ರಿಲ್.20 ರoದು ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾoಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂ. 15,000/- ಹಾಗೂ ಮೊಗ್ರು ಗ್ರಾಮ ಮುಗೇರಡ್ಕ ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಶ್ರೀ ರಾಮ ಶಿಶುಮಂದಿರದ ಮಕ್ಕಳ ಶಿಕ್ಷಣ ಮತ್ತು ಅನ್ನಯಜ್ಞ ಯೋಜನೆಗೆ ರೂ. 5,000/- ದೇಣಿಗೆಯನ್ನು ನೀಡಿ ಸಹಕರಿಸಿದ್ದಾರೆ. ಕನ್ಯಾಡಿ ಸೇವಾಭಾರತಿ ಕೇಂದ್ರದ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್, ಖಜಾoಚಿ ಶ್ರೀ ಎ.ಜೈ ರಾಜ್ ಸಾಲ್ಯಾನ್, ಸಿಬ್ಬಂದಿ ವರ್ಗ, ಮೊಗ್ರು ಗ್ರಾಮ ಅಲೆಕ್ಕಿ ಶಿಶುಮಂದಿರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ನವ ಜೋಡಿಗಳಿಗೆ ಶುಭ ಹಾರೈಸಿ, ಕೃತಜ್ಞತೆ ಸಲ್ಲಿಸಿದರು.