Saturday, May 9, 2026

ಪ್ರಾದೇಶಿಕ

ಬಂಟ್ವಾಳ

ಎಪ್ರಿಲ್ 17ರಂದು ಬಿ.ಸಿ.ರೋಡಿನಲ್ಲಿ ದ.ಕ. ಜಿಲ್ಲಾ ಮಟ್ಟದ ‘ಜಾಗರಣ ಟ್ರೋಫಿ’ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್

ಬಂಟ್ವಾಳ : ಹಿಂದು ಜಾಗರಣ ವೇದಿಕೆ, ಹಿಂದು ಯುವವಾಹಿನಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 'ಜಾಗರಣ ಟ್ರೋಫಿ - 2021' ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಎಪ್ರಿಲ್ 17ರಂದು ಬಿ.ಸಿ.ರೋಡ್ ಗಾಣದಪಡ್ಪು ಮೈದಾನದಲ್ಲಿ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ತಿಳಿಸಿದರು. ಬಂಟ್ವಾಳ ಪ್ರೆಸ್...
ಬಂಟ್ವಾಳ

ಉಡುಪಿ ವಿಭಾಗ ಮಟ್ಟದ ವಿಮಾ ಕ್ಷೇತ್ರದ ಸಾಧನೆಯಲ್ಲಿ ಪ್ರಥಮ ಸ್ಥಾನಗಳಿಸಿದ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಇವರಿಗೆ ಸನ್ಮಾನ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಗುರುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ ವಿಭಾಗ ಮಟ್ಟದ ವಿಮಾ ಕ್ಷೇತ್ರದ ಸಾಧನೆಯಲ್ಲಿ ಪ್ರಥಮ ಸ್ಥಾನಗಳಿಸಿದ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಇವರನ್ನು ಸನ್ಮಾನಿಸಲಾಯಿತು. ಶಾಖಾಧಿಕಾರಿ ಪ್ರಕಾಶ್ಚಂದ್ರ ನಾಯಕ್, ಉಪ ಶಾಖಾಧಿಕಾರಿ ಸುಂದರ ಮೇರ, ಶ್ರೀಪಾದ ಭಟ್, ಆಡಳಿತಾಧಿಕಾರಿ ಜಯರಾಮ ನೆಲ್ಲಿತ್ತಾಯ ಮತ್ತಿತರರು ಇದ್ದರು....
ಪುತ್ತೂರು

ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ ಕಾರ್ಯಕ್ರಮದ ಬಹುಮಾನ ವಿತರಣೆ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ ಕಾರ್ಯಕ್ರಮ ಕಲಾ ಕದನದ ಬಹುಮಾನ ವಿತರಣಾ ಕಾರ್ಯಕ್ರಮವು ಕಾಲೇಜಿನ ಆವರಣದಲ್ಲಿ ನಡೆಯಿತು. ವಿಜೇತರಿಗೆ ಬಹುಮಾನವನ್ನು ವಿತರಿಸಿದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಶ್ರೀ.ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ, ಪಾಠದ ಜತೆಗೆ ಪಠ್ಯೇತರ ವಿಷಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ ಮತ್ತು ಕಲಿಕೆಯ ಮಟ್ಟವು ಏರಿಕೆಯಾಗುತ್ತದೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ, ಸೋಲುಗೆಲುವು ಸಾಮಾನ್ಯ ಅದನ್ನು...
ಪುತ್ತೂರು

ವಿವೇಕಾನಂದ ಹಾಸ್ಟೆಲ್ಸ್ ನಲ್ಲಿ ಯುಗಾದಿ ಹಬ್ಬ ಹಾಗೂ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಜಯಂತಿ ಆಚರಣೆ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಇಲ್ಲಿನ ನೆಹರೂನಗರದ ವಿವೇಕಾನಂದ ವಸತಿ ನಿಲಯಗಳಲ್ಲಿ ಯುಗಾದಿ ಹಬ್ಬ ಹಾಗೂ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಜಯಂತಿ ಕಾರ್ಯಕ್ರಮ ಮಂಗಳವಾರ ನಡೆಯಿತು. ನಳಂದಾ ಹುಡುಗರ ವಸತಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ತಿರುಮಲೇಶ್ವರ ಭಟ್, ಭಾರತೀಯರ ಹೊಸವರ್ಷ ಯುಗಾದಿ. ಇಂಗ್ಲೀಷ್ ಗ್ರೆಗೋರಿಯನ್ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷ ಜನವರಿಯಲ್ಲಿ ಬರುತ್ತದೆ. ನಮ್ಮ ಜೀವನದಲ್ಲಿ ಅನುಭವಿಸಿದ ಸಿಹಿ-ಕಹಿ...
ಪುತ್ತೂರು

ಪುತ್ತೂರಿನ ಬನ್ನೂರು ಕಟ್ಟೆ ನಿವಾಸಿ ಪ್ರಭಾಕರ ನಾಯ್ಕ್ ಹೃದಯಾಘಾತದಿಂದ ನಿಧನ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಬನ್ನೂರು ಕಟ್ಟೆ ನಿವಾಸಿ 51 ವರ್ಷದ ಪ್ರಭಾಕರ ನಾಯ್ಕ್ ರವರು ಎಪ್ರಿಲ್ 14 ರಂದು ತಡ ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸುನಿತಾ, ಪುತ್ರ ಶೇಷಗಿರಿ, ಸಹೋದರ ಮೋಹನ್ ನಾಯ್ಕ್, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ....
ಪುತ್ತೂರು

ಸವಣೂರು ರೈಲು ಹಳಿಯಲ್ಲಿ ಯುವಕನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು-ಕಾಣಿಯೂರು ರೈಲು ಮಾರ್ಗದ ಮದ್ಯೆ ಸವಣೂರು ಗೇಟ್ ಬಳಿ ಹಳಿಯಲ್ಲಿ ಎ.15 ರಂದು ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ದಂಬೆ ನಿವಾಸಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಿ. ಬಾಲಕೃಷ್ಣ ರೈ ಕೇನ್ಯ ಎಂಬವರ ಪುತ್ರ 34 ವರ್ಷದ ಮಹೇಶ್ ಯಾನೆ ಸನ್ನು ಎಂಬವರ ಶವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ರುಂಡ ಪತ್ತೆಯಾಗಿದೆ....
ಪುತ್ತೂರು

ಸರಿಗಮಪ ಖ್ಯಾತಿಯ ಪುಟಾಣಿ ಗಾನಕೋಗಿಲೆ ಜ್ಞಾನ ಗುರುರಾಜ್ ಕಂಠದಲ್ಲಿ ಮೂಡಿಬಂದ ಮಹಾಲಿಂಗೇಶನ ಭಕ್ತಗೀತೆ ಇಂದು ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾತ್ರೆ ಆರಂಭಗೊಂಡಿದ್ದು, ಇದರ ಪ್ರಯುಕ್ತ, ಸಿ.ಆರ್ ಕ್ರಿಯೇಷನ್ ಅರ್ಪಿಸುವ, ಅನು ಪ್ರೊಡ್ರಕ್ಷನ್‍ನಲ್ಲಿ, ಮಲೆನಾಡಿನ ಹೆಣ್ಣು ಖ್ಯಾತಿಯ ಚರಣ್ ಉಪ್ಪಾಳಿಗೆ ನಿರ್ಮಾಣದಲ್ಲಿ, ಶುಭ್ರ ಪುತ್ರಕಳ ಇವರ ಸಾಹಿತ್ಯದಲ್ಲಿ, ಸರಿಗಮಪ ಖ್ಯಾತಿಯ ಪುಟಾಣಿ ಗಾನಕೋಗಿಲೆ ಜ್ಞಾನ ಗುರುರಾಜ್ ಕಂಠದಲ್ಲಿ ಮೂಡಿಬಂದ ಪುತ್ತೂರಿನ ಮಹಾಲಿಂಗೇಶ್ವರ ದೇವರ, ಈಶ ಮಹಾಲಿಂಗೇಶ ಎಂಬ ಭಕ್ತಿ ಪ್ರಧಾನ ಆಲ್ಬಮ್ ಸಾಂಗ್ ಇಂದು ಸಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಅರ್ಚಕರಿಂದ ಬಿಡುಗಡೆಗೊಳ್ಳಲಿದೆ. ಈ ಆಲ್ಬಮ್...
ಬೆಳ್ತಂಗಡಿ

ವಿಷು ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದ ಮುಳಿಯ ಜುವೆಲ್ಸ್-ಕಹಳೆ ನ್ಯೂಸ್

ಬೆಳ್ತಂಗಡಿ : ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ವಿಷು ಹಬ್ಬ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಎಸ್‍ಡಿಎಮ್ ಶಿಕ್ಷಕರಾದ ದಿವಾಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿಷು ಹಬ್ಬದ ಸಾಂಪ್ರದಾಯಿಕ ಹಿನ್ನಲೆ ಹಾಗೂ ವಿಷು ಹಬ್ಬದ ಉಪಯೋಗಗಳನ್ನು ತಿಳಿಸಿದರು. ನಮ್ಮ ಜಾನಪದ ಸಂಸ್ಕøತಿಯ ಆಚರಣೆಗಳಲ್ಲಿ ಒಂದಾದ ವಿಷು ಹಬ್ಬವು ಸ್ಥಳಮೂಲ, ಕೃಷಿ, ಸಂಸ್ಕøತಿಯನ್ನು ಕೂಡಿರುತ್ತದೆ. ಮುಳಿಯ ಜ್ಯುವೆಲ್ಸ್ ನವರು  ಈ ರೀತಿಯ ಜಾನಪದ ಸಂಸ್ಕøತಿಯನ್ನು ಉಳಿಸಿಕೊಂಡು ಬರುತ್ತಿರುವುದು ಒಂದು ಶ್ಲಾಘಿನೀಯ ವಿಚಾರ ಎಂದು...
1 760 761 762 763 764 875
Page 762 of 875