Wednesday, June 10, 2026

ಪ್ರಾದೇಶಿಕ

ಪುತ್ತೂರು

ವಿವೇಕಾನಂದ ಪದವಿಪೂರ್ವಕಾಲೇಜಿನ ಶೆಫಾಲಿಕಾ ಗೆ ಆರ್ಕಿಟೆಕ್ಚರ್ ವಿಭಾಗದಲ್ಲಿ 254 ನೇ ರ‍್ಯಾಂಕ್– ಕಹಳೆ ನ್ಯೂಸ್

ಪುತ್ತೂರು: ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೆಫಾಲಿಕಾ 254 ನೇ ರ‍್ಯಾಂಕ್ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ನಾಟಾ ಫಲಿತಾಂಶವನ್ನು ಪರಿಗಣಿಸಿ ಈ ರ‍್ಯಾಂಕ್ ನ್ನು ನೀಡಲಾಗಿದೆ. ಈಕೆ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಶರ್ಮಿಳಾ ಗ್ಲಾಡೀಸ್ ದಂಪತಿಗಳ ಸುಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು...
ಬಂಟ್ವಾಳ

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ರಾಜ್ಯದ ಅತೀ ದೊಡ್ಡ ಕನ್ನಡ ಮಾಧ್ಯಮ ಶಾಲೆ: ಡಾ| ಪ್ರಭಾಕರ ಭಟ್- ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ-ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಿಸುತ್ತಾ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಡಾ ಪ್ರಭಾಕರ ಭಟ್ ಶ್ರೀರಾಮ ಪ್ರೌಢಶಾಲೆಯು ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವ ರಾಜ್ಯದ ಒಂದು ದೊಡ್ಡ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಂತಸದ ವಿಷಯ. ಕಳೆದ 40 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಪ್ರೌಢಶಾಲೆಯೊಂದಿಗೆ ಆರಂಭಗೊಂಡ...
ಪುತ್ತೂರು

ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಮೃತ್ ಎಚ್ ವಿ ಗೆ 752ನೇ ರ‍್ಯಾಂಕ್ – ಕಹಳೆ ನ್ಯೂಸ್

ಪುತ್ತೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆಗಳ (ಸಿಎಸ್‌ಇ) 2020-21 ನೇ ಸಾಲಿನ ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಮೃತ್ ಎಚ್ ವಿ 752ನೇ ರ‍್ಯಾಂಕ್ ಗಳಿಸುವ ಮೂಲಕ ಕಾಲೇಜಿಗೆ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಅಮೃತ್ ಎಚ್ ವಿ ಯವರು ತಮ್ಮ ಪಿಯುಸಿ ಶಿಕ್ಷಣವನ್ನು 2009-2011ರಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ಪಡೆದು ಬಳಿಕ ಇಂಜಿನಿಯರಿ0ಗ್ ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದ್ದರು....
ಬೆಳ್ತಂಗಡಿ

ಸಂಕಷ್ಟದಲ್ಲಿರುವ ಮಗುವಿಗೆ ಆಟೋ ರಿಕ್ಷಾ ಚಾಲಕರಿಂದ ನೆರವು- ಕಹಳೆ ನ್ಯೂಸ್

ಬೆಳ್ತಂಗಡಿ: ಆಟೋ ಇಮ್ಯೂನ್ ಎನ್ಸ್ ಫಾಲಿಟಿಸ್ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಶಿಕಾಳ ಚಿಕಿತ್ಸೆಗೆ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿಯ ಆಟೋ ರಿಕ್ಷಾ ಚಾಲಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಂಗ್ರಹಿಸಿದ 15,100 ರೂಪಾಯಿ ಧನ ಸಹಾಯವನ್ನು ಕಡಂಬಿಲ್ತಯಿ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಹಸ್ತಾಂತರಿಸಿದರು. ಬೆಳ್ತಂಗಡಿ ತಾಲೂಕಿನ ಕಲಿಯ ಗ್ರಾಮದ ಬಿಳಿಬೈಲು ನಿವಾಸಿ ನವೀನ್ ರಮ್ಯ ದಂಪತಿಗಳ ಪುತ್ರಿ ವಿಶಿಕಾಳಿಗೆ ಆಟೋ ಇಮ್ಯೂನ್ ಎನ್ಸ್ ಫಾಲಿಟಿಸ್ ಎಂಬ ದೇಹದ...
ಪುತ್ತೂರು

ವಿವೇಕಾನಂದ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ‘ಸೊಳ್ಳೆಗಳ ಲೋಕ’ ಎಂಬ ವಿಷಯದಲ್ಲಿ ವೆಬಿನಾರ್ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಕಾಲೇಜಿನ ನೇಚರ್ ಕ್ಲಬ್, ಪ್ರಾಣಿಶಾಸ್ತ್ರ ವಿಭಾಗ, ಸಸ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ‘ಸೊಳ್ಳೆಗಳ ಲೋಕ’ ಎಂಬ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ, ವಿವೇಕಾನಂದ ಪದವಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಪ್ರಸಾದ್ ಹಲವರ ಮನಸ್ಸಿನಲ್ಲಿ ಸೊಳ್ಳೆಗಳು ಶೂನ್ಯೋಪಯೋಗಿ ಜೀವಿಗಳು ಎಂಬ ಅನಿಸಿಕೆಯಿದೆ. ಆದರೆ ಅವು ಪ್ರಕೃತಿ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಗಮನಾರ್ಹ ವಿಷಯ ಎಂದು...
ಪುತ್ತೂರು

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು – ಕಹಳೆ ನ್ಯೂಸ್

ಪುತ್ತೂರು: 26ವರ್ಷಗಳ ಹಿಂದೆ ಸಾಲ್ಮರದ ನಿವೃತ್ತ ತಹಸೀಲ್ದಾರ್ ಲಿಂಗಪ್ಪ ಗೌಡರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬ0ಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಕೇರಳದ ಎರ್ನಾಕುಲಂ ನಿವಾಸಿ ಜೊಡ್‌ಸನ್ ಎಂಬ ಆರೋಪಿಯು 1995ರಲ್ಲಿ ಲಿಂಗಪ್ಪ ಗೌಡರ ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿ ಲಿಂಗಪ್ಪ ಗೌಡರ ಪತ್ನಿ ಗೀತಾ ಅವರಿಗೆ ಚೂರಿ ತೋರಿಸಿ ಕೈಯಲ್ಲಿದ್ದ ಬಂಗಾರದ ಬಲೆಗಳನ್ನು ದರೋಡೆ ಮಾಡಿದ್ದ. ಪ್ರಕರಣದ ಆರೋಪಿ...
ಕಡಬ

ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್‌ನ ಕಾಮಪುರಾಣ; ಯುವತಿಗೆ ಗರ್ಭಧಾನ ಮಾಡಿ ಅಬಾರ್ಷನ್ ಮಾಡಿಸಿದ್ದ ಭೂಪ.. ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಕರಣವನ್ನು ಬೆಳಕಿಗೆ ತಂದ ಕಹಳೆ ನ್ಯೂಸ್ ವರದಿಗಾರ- ಕಹಳೆ ನ್ಯೂಸ್

ಕಡಬ: ಕಳೆದ ಕೆಲ ದಿನಗಳ ಹಿಂದೆ ಅಪ್ರಾಪ್ತೆ ಯುವತಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ವಿರುದ್ದ ಕೊನೆಗೂ ದೂರು ದಾಖಲಾಗಿದೆ. ನ್ಯಾಯಕ್ಕಾಗಿ ಕಡಬ ಠಾಣೆಗೆ ಕುಟುಂಬ ಕಲಹ, ಪತಿಯಿಂದ ಸಮಸ್ಯೆ ಹಾಗೂ ಹಲವಾರು ಸಮಸ್ಯೆಗಳಿಂದ ನ್ಯಾಯ ಅರಸುತ್ತಾ ಬರುವ ಮಹಿಳೆಯರೇ ಈ ಪೊಲೀಸ್ ಸಿಬ್ಬಂದಿ ಶಿವರಾಜ್‌ಗೆ ಟಾರ್ಗೆಟ್ ಎನ್ನಲಾಗಿದೆ. ಇನ್ನು ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಇದೇ ವ್ಯಾಪ್ತಿಯ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದು, ಅವಳು...
ಪುತ್ತೂರುಬಂಟ್ವಾಳ

ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಬರೆಂಜ ನಿವಾಸಿ ನಾರಾಯಣ ಮೂಲ್ಯರವರ ಮಗನ ಚಿಕಿತ್ಸೆಗೆ ಆರ್ಥಿಕ ಸಹಾಯದ ಚೆಕ್ಕನ್ನು ಹಸ್ತಾಂತರಿಸಿದ ಉದ್ಯಮಿ ಅಶೋಕ್ ಕುಮಾರ್ ರೈ- ಕಹಳೆ ನ್ಯೂಸ್

ಬಂಟ್ವಾಳ : ಪುಣಚ ಗ್ರಾಮದ ಬರೆಂಜ ನಿವಾಸಿ ನಾರಾಯಣ ಮೂಲ್ಯರ ಮಗ ಶೇಖರ್ ಅವರ ಅನಾರೋಗ್ಯದ ಚಿಕಿತ್ಸೆಗೆ ಬೇಕಾದ ಆರ್ಥಿಕ ಸಹಾಯದ ಚೆಕ್ಕನ್ನು ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಮ್ಮ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನೀಡಿದರು....
1 719 720 721 722 723 885
Page 721 of 885