Wednesday, June 10, 2026

ಪ್ರಾದೇಶಿಕ

ಕುಂದಾಪುರ

250 ವರ್ಷ ಹಳೆಯ‘ಮಾನಸ ಚರಿತ್ರೆ’ ಎಂಬ ಅಪೂರ್ವ ಯಕ್ಷಗಾನ ಪ್ರಸಂಗದ ತಾಳೆಗರಿ ಪತ್ತೆ – ಕಹಳೆ ನ್ಯೂಸ್

ಕುಂದಾಪುರ : ಹದಿನೆಂಟನೆಯ ಶತಮಾನದ ಮೂಲಿಕೆ ವೆಂಕಣ್ಣ ಕವಿ ವಿರಚಿತ "ಮಾನಸಚರಿತ್ರೆ" ಎಂಬ ಅಪೂರ್ವ ಯಕ್ಷಗಾನ ಪ್ರಸಂಗದ ತಾಳೆಗರಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ದಿ॥ ಶಿರೂರು ಫಣಿಯಪ್ಪಯ್ಯ ಎಂಬ ಭಾಗವತರ ಸಂಗ್ರಹದಲ್ಲಿದ್ದ ತಾಳೆಗರಿ ಮತ್ತು ಅವರ ಹಸ್ತ ಪ್ರತಿ ಭಾಗವತರ ಸುಪುತ್ರ ಉಮೇಶ ಶಿರೂರು ಅವರಿಗೆ ದೊರೆತಿದೆ. ಈ ತಾಳೆಗರಿಯನ್ನು ಓದಿ ಗ್ರಂಥವನ್ನು ಸಂಪಾದಿಸುತ್ತಿರುವ ಯಕ್ಷಗಾನ ವಿದ್ದಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಇದರಲ್ಲಿ ಮನಸ್ಸಿನ ವಿವಿಧ ಭಾವನೆಗಳೇ...
ಪುತ್ತೂರು

ಪುತ್ತೂರು ಗ್ರಾಮಾಂತರ ಠಾಣಾ ಎಸ್ ಐ ಉದಯ ರವಿ ನೇತೃತ್ವದಲ್ಲಿ ಬಲ್ನಾಡು ಗ್ರಾಮದ ಬೀಟ್ ಸಭೆ -ಕಹಳೆ ನ್ಯೂಸ್

ಬಲ್ನಾಡು ಗ್ರಾಮದ ಬೀಟ್ ಸಭೆ ಬೆಳಿಯೂರುಕಟ್ಟೆಯ ಸಾಜ ಕ್ರಾಸ್ ಬಳಿ ಪುತ್ತೂರು ಗ್ರಾಮಾಂತರ ಠಾಣಾ ಎಸ್ ಐ ಉದಯ ರವಿ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಮಾತಾಡಿದ ಅವರು ಪ್ರಸುತ ದಿನಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳನ್ನು ತಡೆಗಟ್ಟಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕಾಗಿ, ಮತ್ತು ಬೆಳಿಯೂರುಕಟ್ಟೆಯ ಸಾಜ ಕ್ರಾಸ್ ಬಳಿ ಸಾರ್ವಜನಿಕರ ಸಹಕಾರದಿಂದ ಸಿ ಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ...
ಮೂಡಬಿದಿರೆ

ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡುಬಿದಿರೆ : 2020ರ ಸಾಲಿನ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ಕಲ್ಲಬೆಟ್ಟು ಮೂಡುಬಿದಿರೆಯಲ್ಲಿ ಏರ್ಪಡಿಸಲಾಗಿತ್ತು. 2020ರ ಸಾಲಿನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಕಾಲೇಜಿಗ ಪ್ರಥಮ ಸ್ಥಾನ ಪಡೆದು ಪ್ರಸ್ತುತ ಪ್ರತಿಷ್ಠ್ಟಿತ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸಾಗರ ತಾಲೂಕಿನ ಶ್ರೀಮತಿ ಸತ್ಯವತಿ ಮತ್ತು ಜಿ ರಾಮಚಂದ್ರ ದಂಪತಿಗಳ ಪುತ್ರನಾದ...
ಪುತ್ತೂರು

ಅಂಬಿಕಾದಲ್ಲಿ ಭಗವದ್ಗೀತಾ ಉಪನ್ಯಾಸ ಕಾರ್ಯಕ್ರಮ- ಕಹಳೆ ನ್ಯೂಸ್

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆಯಲ್ಲಿ ಭಗವದ್ಗೀತೆಯ ಅಧ್ಯಯನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದ ವಾಗ್ಮಿ ,ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಉಪಾಧ್ಯಾಯರು ಮಾತನಾಡುತ್ತಾ ಕರ್ತವ್ಯದಿಂದ ವಿಮುಖರಾಗಬಾರದು. ಇದು ಧರ್ಮ, ಕರ್ತವ್ಯ ಪ್ರಜ್ಞೆ ಬಿಟ್ಟು ಉಳಿದ ಸಂದರ್ಭದಲ್ಲಿ ಯಾರನ್ನೂ ದ್ವೇಷಿಸಬಾರದು. ಎಲ್ಲರನ್ನೂ ಪ್ರೀತಿಸಬೇಕು. ಗೆಳೆತನ, ಮಿತ್ರಭಾವದಿಂದ ಎಲ್ಲರನ್ನೂ ಕಾಣಬೇಕು. ಕರುಣೆ ನಮ್ಮ ಹೃದಯದಲ್ಲಿ ಉತ್ಪತ್ತಿಯಾಗಬೇಕು. ಅಹಂಕಾರ ಇದ್ದರೆ ಯಾವುದೂ ದಕ್ಕಲಾರದು. ಎಲ್ಲಾ ವೃತ್ತಿಗಳಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ,...
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ 2020 ಅವಕಾಶಗಳು ಮತ್ತು ಸವಾಲುಗಳು’ – ರಾಷ್ಟ್ರ ಮಟ್ಟದ ವೆಬಿನಾರ್ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಐಕ್ಯೂಎಸಿ ಮತ್ತು ಎನ್‍ಇಪಿ ಟಾಸ್ಕ್ ಫೋರ್ಸ್ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅವಕಾಶಗಳು ಮತ್ತು ಸವಾಲುಗಳು’ ಕುರಿತು ನಡೆದ ರಾಷ್ಟ್ರ ಮಟ್ಟದ ವೆಬಿನಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ ಎಮ್‍ಐಟಿ ಮಣಿಪಾಲದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಕರುಣಾಕರ್ ಕೋಟೆಕಾರ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಗುಣಾತ್ಮಕ ಶಿಕ್ಷಣವನ್ನು ನೀಡುವ ಸಂಕಲ್ಪವನ್ನು ಹೊಂದಿದೆ. ಇದು ವಿದ್ಯಾರ್ಥಿಗಳ...
ಮೂಡಬಿದಿರೆ

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಪ0ಡಿತ್ ದೀನ್ ದಯಾಳ್ ಉಪಾಧ್ಯಾಯರ 105ನೇ ಜನ್ಮ ದಿನಾಚರಣೆ- ಕಹಳೆ ನ್ಯೂಸ್

ಮೂಡುಬಿದಿರೆ: ಅ0ತ್ಯೋದಯದ ಪ್ರತಿಪಾದಕ ಪ0ಡಿತ್ ದೀನ್ ದಯಾಳ್ ಉಪಾಧ್ಯಾಯರ 105ನೇ ಜನ್ಮದಿನೋತ್ಸವದ ಸುಸ0ದರ್ಭದಲ್ಲಿ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇ0ದ್ರ ಮ0ಗಳೂರು, ಎಕ್ಸಲೆ0ಟ್ ವಿದ್ಯಾ ಸ0ಸ್ಥೆಗಳು ಮತ್ತು ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಇವರ ಸ0ಯುಕ್ತ ಆಶ್ರಯದಲ್ಲಿ ಸ್ವಾತ0ತ್ರ್ಯದ ಅಮೃತ ಮಹೋತ್ಸವ ಹಾಗೂ ಫಿಟ್ ಇ0ಡಿಯಾ ಫ್ರೀಡಮ್ ರನ್ ಟೂ ಪಾಯಿ0ಟ್ ಓ ಕಾರ್ಯಕ್ರಮಕ್ಕೆ ಎಕ್ಸಲೆ0ಟ್ ವಿದ್ಯಾ ಸ0ಸ್ಥೆಯ ವೀರಸಾಗರ ಸಭಾ0ಗಣದಲ್ಲಿ ಚಾಲನೆ ನೀಡಲಾಯಿತು....
ಪುತ್ತೂರು

ಕುಂಜೂರು ಪಂಜ: ಚಾಕಲೇಟ್ ಆಮಿಷವೊಡ್ಡಿ ಶಾಲಾ ಬಾಲಕಿಗೆ ಕಿರುಕುಳ: ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯಿಂದ ಕೃತ್ಯ- ಕಹಳೆ ನ್ಯೂಸ್

ಪುತ್ತೂರು: ಮಧ್ಯಾಹ್ನ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತಿಯಾಗಿರುವ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಚಾಕಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ಕಿರುಕುಳ ನೀಡಿದ ಘಟನೆ ಕುಂಜೂರುಪಂಜದಲ್ಲಿ ನಡೆದಿದೆ. ಕುಂಜೂರುವಂಜೆ ಶಾಲೆಯ ವಿದ್ಯಾರ್ಥಿನಿ ಸೆ.23ರಂದು ಮನೆಗೆ ನಡೆದುಕೋಮಡು ಹೋಗುತ್ತಿರುವ ಸಂದರ್ಭದಲ್ಲಿ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಆಕೆಯ ಬಳಿ ಬೈಕ್ ನಿಲ್ಲಿಸಿ ನಿನಗೆ ಚಾಕಲೇಟ್ ಕೊಡಿಸುತ್ತೇನೆ. ನನ್ನೊಂದಿಗೆ ಬೈಕ್‍ನಲ್ಲಿ ಬಾ ಎಂದು ಕರೆದಿದ್ದು, ಆತಂಕಗೊಂಡ ವಿದ್ಯಾರ್ಥಿನಿ...
ಪುತ್ತೂರು

2 ಲಕ್ಷಕ್ಕೂ ಅಧಿಕ ಮೌಲ್ಯದ ಮರದ ದಿಮ್ಮಿಗಳು ಮನೆಯಲ್ಲಿ ಸಂಗ್ರಹ, ಪುತ್ತೂರಿನ ಅರುಣ್ ಕುಮಾರ್ ಮನೆಗೆ ಅರಣ್ಯಾಧಿಕಾರಿಗಳಿಂದ ದಾಳಿ- ಕಹಳೆ ನ್ಯೂಸ್

ಪುತ್ತೂರು ಅರಣ್ಯ ಇಲಾಖೆಯಿಂದ, KFDS ಇಲಾಖಾ ನೌಕರರೋರ್ವರ ಮನೆಗೆ ದಾಳಿ ನಡೆದಿದೆ. ಪುತ್ತೂರು KFDS ಇಲಾಖೆಯ ನೌಕರರಾಗಿರುವ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಅರುಣ್ ಕುಮಾರ್‌ರವರ ,ಮನೆಯಲ್ಲಿ ಸುಮಾರು 2.5 ಲಕ್ಷ ಮೌಲ್ಯದ ಬೀಟೆ, ಹಲಸು, ಸಾಗುವಾಣಿ ಮತ್ತು ಇತರೆ ಜಾತಿಯ ಮರಗಳ ದಿಮ್ಮಿಗಳ ದಾಸ್ತಾನು ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ವಿಚಾರ ತಿಳಿದು ಅಧಿಕಾರಿಗಳು ಅರುಣ್ ಕುಮಾರ್‌ರವರ ಮನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅರುಣ್ ಮನೆಯಲ್ಲಿ...
1 720 721 722 723 724 885
Page 722 of 885