ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೆಮ್ಮಾಯಿ ನಿವಾಸಿ ರಕ್ಷಾ ರೈ ಎಂಬವರಿಗೆ ವಜ್ರತೇಜಸ್ ತಂಡದಿಂದ ಸಹಾಯಧನ ವಿತರಣೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂಗ್ರಹವಾದ ಮೊತ್ತದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೆಮ್ಮಾಯಿ ನಿವಾಸಿ ರಕ್ಷಾ ರೈ ಎಂಬವರಿಗೆ ವಜ್ರತೇಜಸ್ ತಂಡದಿಂದ ಮನೆಗೆ ಭೇಟಿ ನೀಡಿ ಅವರ ಮುಂದಿನ ಚಿಕಿತ್ಸಾ ವೆಚ್ಚಕ್ಕೆ ಸಹಾಯಧನ ನೀಡಲಾಯಿತು.
ಈ ಸಂದರ್ಭದಲ್ಲಿ ವಜ್ರತೇಜಸ್ ಹಿಂದೂ ಕವಚ್ ಇದರ ಅಧ್ಯಕ್ಷರಾದ ಮುರಳೀಕೃಷ್ಣ ಹಸಂತಡ್ಕ, ವಿ. ಹಿಂ. ಪ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖರಾದ ಕೇಶವಪ್ರಸಾದ್ ಬಜಪ್ಪಳ, ವಿ. ಹಿಂ. ಪ ಗ್ರಾಮಾಂತರ ಅಧ್ಯಕ್ಷರಾದ ಜಯಂತ್ ಶೆಟ್ಟಿ ಕಂಬಳತ್ತಡ್ಡ , ಪುತ್ತೂರು ನಗರ ಸೇವಾ ಪ್ರಮುಖರಾದ ಹರೀಶ್ ದೋಲ್ಪಡಿ, ಪುತ್ತೂರು ನಗರ ಬಜರಂಗದಳ ಸಪ್ತಹಿಕ್ ಮಿಲನ್ ಪ್ರಮುಖರಾದ ಸಂದೀಪ್ ಸಿಂಗಣಿ, ಅಶೋಕ್ ಕೆಮ್ಮಾಯಿ, ಪ್ರಕಾಶ್ ಕೆಮ್ಮಾಯಿ ಉಪಸ್ಥಿತರಿದ್ದರು.











