ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ರ್ಟೀಯ ಪೋಷಣೆ ಅಭಿಯಾನ್ ಕಾರ್ಯಕ್ರಮ- ಕಹಳೆ ನ್ಯೂಸ್
ರಾಷ್ರ್ಟೀಯ ಪೋಷಣೆ ಅಭಿಯಾನ್ ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ರ್ಟೀಯ ಪೋಷಣೆ ಅಭಿಯಾನ್ ಕಾರ್ಯಕ್ರಮ ನಡೆಸಲಾಯಿತು. ಸಜೀಪದ ಮಾಚಿದೇವ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಸುಬ್ರಹ್ಮಣ್ಯ ಭಟ್ ಆಯುರ್ವೆದ ತಜ್ಞರು ಸಮತೋಲಿತ ಆಹಾರದ ಮಾಹಿತಿ ನೀಡಿ ಅಪೌಷ್ಟಿಕತೆ ನಿವಾರಣೆಗೆ ನಮ್ಮಲ್ಲಿಯೇ ದೊರೆಯುವ ಸಮತೋಲಿತ ಆಹಾರದ ಅಗತ್ಯತೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ 40 ಮಹಿಳೆಯರು ಉಪಸ್ಥಿತರಿದ್ದರು. ನೆಟ್ಲ ಸರಸ್ವತಿ ಸದನದಲ್ಲಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆಯುರ್ವೇದ ವೈದ್ಯೆ ಡಾ|...







