Wednesday, June 10, 2026

ಪ್ರಾದೇಶಿಕ

ಬೆಳ್ತಂಗಡಿ

ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ- ಕಹಳೆ ನ್ಯೂಸ್

ಪಂಡಿತ್ ದೀನದಯಾಳ್ ಉಪಾಧ್ಯಾಯ ಇವರ ಜನ್ಮ ದಿನಾಚರಣೆಯನ್ನು ಬಂದಾರು ಗ್ರಾಮದ ಮೈರೋಳ್ತಡ್ಕ -218 ನೇ ವಾರ್ಡಿನ ಬೂತ್ ಅಧ್ಯಕ್ಷರಾದ ಪ್ರಶಾಂತ್ ಗೌಡರ ಮನೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೀನದಯಾಳ್ ಜೀಯವರ ಜೀವನ ಚರಿತ್ರೆಯನ್ನು ಮಂಡಲ ಉಪಾಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ತಿಳಿಸಿದರು. ಕಾರ್ಯಕ್ರಮದಲ್ಲಿ ಬಂದಾರು ಶಕ್ತಿ ಕೇಂದ್ರದ ಪ್ರಮುಖ್ ಅಶೋಕ ಗೌಡ ಪಾಂಜಾಳ, ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ, ಕಾರ್ಯದರ್ಶಿ ಜನಾರ್ದನ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ....
ಬಂಟ್ವಾಳ

 ಮರಕ್ಕೆ ಕಾರು ಡಿಕ್ಕಿ : ಕಿರು ಚಿತ್ರ ತಂಡದ ಐವರಿಗೆ ಗಾಯ – ಕಹಳೆ ನ್ಯೂಸ್

ಬಂಟ್ವಾಳ: ಮಂಗಳೂರು-ಬಿಸಿರೋಡು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ಕಾರು ಮರಕ್ಕೆ ಡಿಕ್ಕಿಯಾಗಿ ಐವರು ಗಾಯಗೊಂಡ ಘಟನೆ ನಡೆದಿದೆ. ಮಂಗಳೂರಿನಿಂದ ಪುತ್ತೂರು ಕಡೆಗೆ ಕಿರು ಚಲನಚಿತ್ರವೊಂದರ ಶೂಟಿಂಗ್ ನಡೆಸಲು ತೆರಳುತ್ತಿದ್ದ ವೇಳೆ ರಾಮಲ್ ಕಟ್ಟೆ ಎಂಬಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಗೆ ತೆರಳಿ ಮರವೊಂದಕ್ಕೆ ಡಿಕ್ಕಿಯಾಗಿದೆ.   ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಗೊಂಡಿದ್ದು, ಕಾರಿನಲ್ಲಿದ್ದ ಆನಂದಿತ್, ಶರತ್, ಶುಸಾನ್, ಹರ್ಷ, ಶ್ರೀರಾಮ್ ಐವರ ಪೈಕಿ...
ಬೆಳ್ತಂಗಡಿ

ನೆಲ್ಯಾಡಿ: ದನ ಮತ್ತು ಹೋರಿಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ರಿಕ್ಷಾ ಪಲ್ಟಿ..! : ದನ ಮತ್ತು ಹೋರಿಗಳ ರಕ್ಷಣೆ – ಕಹಳೆ ನ್ಯೂಸ್

ನೆಲ್ಯಾಡಿ: ಮಾಂಸ ಮಾಡುವ ಉದ್ದೇಶದಿಂದ ಆಲಂಕಾರು ಪರಿಸರದಿಂದ ದನ ಮತ್ತು ಹೋರಿಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ರಿಕ್ಷಾ ನೆಲ್ಯಾಡಿ ಗ್ರಾಮದ ತೋಟದಲ್ಲಿ ಪಲ್ಟಿಯಾಗಿರುವ ಘಟನೆ ಸೆ.23ರಂದು ರಾತ್ರಿ ನಡೆದಿದ್ದು, ಪ್ರಕರಣದಲ್ಲಿ ಚಾಲಕ ರಿಕ್ಷಾ ಸಮೇತ ಪರಾರಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಕೊಕ್ಕಡ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಲಂಕಾರಿನಿಂದ ಹೋರಿ ಹಾಗೂ ದನವೊಂದನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಕದ್ದು ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಕೊಕ್ಕಡಕ್ಕೆ ಸಾಗಾಟ ಮಾಡುತ್ತಿದ್ದ ವೇಳೆ ರಿಕ್ಷಾ ನೆಲ್ಯಾಡಿ...
ಪುತ್ತೂರು

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ಐಒಟಿ ಆಧಾರಿತ ಮೊಬೈಲ್ ಅಪ್ಲಿಕೇಶನ್‍ಗೆ ಉತ್ತಮ ಪ್ರಾಜೆಕ್ಟ್ ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಐಒಟಿ ಆಧಾರಿತ ಮೊಬೈಲ್ ಅಪ್ಲಿಕೇಶನ್ ಬಳಸಿ ಸ್ವಯಂಚಾಲಿತ ನೀರಾವರಿ ವ್ಯವಸ್ಥೆ ಎನ್ನುವ ಯೋಜನೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನಡೆಸಿದ ರಾಜ್ಯಮಟ್ಟದ ಪ್ರದರ್ಶನದಲ್ಲಿ ಉತ್ತಮ ಪ್ರಾಜೆಕ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಸ್ವಯಂಚಾಲಿತ ನೀರಾವರಿ ವ್ಯವಸ್ಥೆಯು ಮುಂದಿನ ಪೀಳಿಗೆಯ ನೀರಾವರಿ ವ್ಯವಸ್ಥೆಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ....
ಬಂಟ್ವಾಳ

ಬಂಟ್ವಾಳ: ಅನುಮಾನಾಸ್ಪದವಾದ ರೀತಿಯಲ್ಲಿ ಹರೀಶ್ ಅವರ ಸಾವು..!ಸೂಕ್ತ ತನಿಖೆ ನಡೆಸುವಂತೆ ವಿ.ಹಿಂ.ಪ ಬಜರಂಗದಳ ವಿಟ್ಲ ಪ್ರಖಂಡ ಹಾಗೂ ಬಂಟ್ವಾಳ ಪ್ರಖಂಡ ವತಿಯಿಂದ ತನಿಖಾಧಿಕಾರಿಯವರಿಗೆ ಮನವಿ-ಕಹಳೆ ನ್ಯೂಸ್

ಬಂಟ್ವಾಳ : ಸಜೀಪ ಮೂಡ ಗ್ರಾಮದ ಬೆಂಕೆ ಪದವಿಪೂರ್ವ ಕಾಲೇಜಿನ ಹಿಂಬದಿಯಲ್ಲಿ ಮನೆ ವಾಸಿಸುತ್ತಿರುವ ಹರೀಶ ( 42 ) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಶಂಕೆಯನ್ನು ವ್ಯಕ್ತಪಡಿಸಿ ಪೊಲೀಸರು ಪ್ರಕರಣವನ್ನು ಮುಚ್ಚುತ್ತಿದ್ದಾರೆ ಮೇಲ್ನೋಟಕ್ಕೆ ಮೃತದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಹತ್ಯೆ ಎಂದು ಕಾಣುತ್ತಿದೆ ಆದರೂ ಇದನ್ನು ಮುಚ್ಚಿಹಾಕಲು ಕಾಣದ ಕೈಗಳು ಯತ್ನಿಸುತ್ತಿದ್ದು ಸಾವಿನ ಸಂಪೂರ್ಣ ತನಿಖೆ ನಡೆಸಬೇಕೆಂದು ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಿಶ್ವ ಹಿಂದೂ ಪರಿಷದ್...
ಪುತ್ತೂರು

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ವಿಷಯದ ಕುರಿತು ವೆಬಿನಾರ್ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಐಕ್ಯುಎಸಿ ಘಟಕದ ಆಶ್ರಯದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಟಾನ ಎನ್ನುವ ವಿಷಯದ ಬಗ್ಗೆ ನಡೆದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತಾಡಿದ ಮಣಿಪಾಲ ಎಂಐಟಿ ಯ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಕರುಣಾಕರ್ ಕೋಟೆಗಾರ್.ಎ ಅವರು ಪಾಶ್ಚಾತ್ಯ ಶಿಕ್ಷಣ ನೀತಿಗಳಿಂದ ನಲುಗಿಹೋಗಿರುವ  ಭಾರತೀಯ ಶಿಕ್ಷಣ ಪದ್ದತಿಯಲ್ಲಿ 34 ವರ್ಷಗಳ ನಂತರ ಆಗುತ್ತಿರುವ ಬದಲಾವಣೆಗಳು ಅತ್ಯಂತ...
ಬಂಟ್ವಾಳ

ಮಂಗಳೂರಿನ ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯ ಶವ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ಮಂಗಳೂರಿನ ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಕನಪಾಡಿ ನಿವಾಸಿ ಬ್ಯುಸಿನೆಸ್ ಮ್ಯಾನ್ ಗುರುಪ್ರಸಾದ್ ಎಂದು ತಿಳಿದು ಬಂದಿದೆ. ಸೆ.20 ರಂದು ಮಂಗಳೂರು ಇಂಟರ್ ಸಿಟಿ ಲಾಡ್ಜ್‍ನಲ್ಲಿ ತಂಗಿದ್ದ, ಗುರುಪ್ರಸಾದ್ ಅವರ ರೂಮ್ ಲಾಕ್ ಆಗಿತ್ತು. ಇಂದು ಸಂಶಯದ ಮೇಲೆ ಪೋಲೀಸರಿಗೆ ದೂರು ನೀಡಿದ್ದು, ಪಾಂಡೇಶ್ಚರ ಎಸ್.ಐ.ಶೀತಲ್ ನೇತ್ರತ್ವದಲ್ಲಿ ಲಾಡ್ಜ್‍ನ ಬಾಗಿಲು ಒಡೆದು ಒಳಗೆ ಪ್ರವೇಶ...
ಪುತ್ತೂರು

ಬಪ್ಪಳಿಗೆಯ ಸಿಬಿಎಸ್‍ಇ ವಿದ್ಯಾಲಯದಲ್ಲಿ ಅಂಬಿಕಾ ಯಕ್ಷಕಲಾ ವೃಂದಕ್ಕೆ ಚಾಲನೆ- ಕಹಳೆ ನ್ಯೂಸ್

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ರೂಪುಗೊಂಡಿರುವ ಯಕ್ಷಗಾನ ತರಬೇತಿ ಮತ್ತು ಪ್ರದರ್ಶನ ಘಟಕವಾದ ‘ಅಂಬಿಕಾ ಯಕ್ಷಕಲಾ ವೃಂದ’ಕ್ಕೆ ಚಾಲನೆ ನೀಡಿ, ‘ಪುರಾಣ ಪಾತ್ರ ಶಿಲ್ಪ-ಅರ್ಜುನ’ ಎಂಬ ವಿಷಯದ ಬಗೆಗೆ ಮಾತನಾಡಿದ ರಾಮಕುಂಜದ ವಿಶ್ರಾಂತ ಕನ್ನಡ ಉಪನ್ಯಾಸಕರಾದ ಗಣರಾಜ ಕುಂಬ್ಳೆ ವ್ಯಾಸ, ಪಂಪ, ಕುಮಾರವ್ಯಾಸನಂತಹ ಕವಿಗಳು ಚಿತ್ರಿಸಿದ ಅರ್ಜುನನ ಪಾತ್ರ ಅತ್ಯಂತ ಉತ್ಕøಷ್ಟವಾದದ್ದು. ಇಂದ್ರನಂದನನಾದ ಆತ ಸಾಹಸಕ್ಕೆ ಪ್ರತಿರೂಪನಾಗಿ ನಮ್ಮ ಕಣ್ಣಮುಂದೆ ಕಾಣಿಸುತ್ತಾನೆ....
1 721 722 723 724 725 885
Page 723 of 885