ಬಿಹಾರದಿಂದ ಮಂಗಳೂರಿಗೆ ಗಾಂಜಾ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ – ಇಬ್ಬರು ಅರೆಸ್ಟ್ -ಕಹಳೆ ನ್ಯೂಸ್
ಬಿಹಾರದಿಂದ ಮಂಗಳೂರಿಗೆ ರೈಲಿನ ಮೂಲಕ ಗಾಂಜಾ ತಂದು ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಬಜ್ಪೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಬಿಹಾರ ರಾಜ್ಯದ ನಿವಾಸಿಗಳಾದ ಹಾಲಿ ಕೃಷ್ಣಾಪುರದಲ್ಲಿ ವಾಸವಿರುವ ಸುನಿಲ್ ಕುಮಾರ್, ಬ್ರಿಜೇಶ್ ಶ್ರೀವತ್ಸ ಎಂದು ಗುರುತಿಸಲಾಗಿದೆ. ಜ ,03 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆಯ ಬದಿಯಲ್ಲಿ ಸುಮಾರು 1 Kg ತೂಕದ ಮಾದಕವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ...






