ಯುವತಿಗೆ ಅಶ್ಲೀಲ ಸಂದೇಶ, ಕೊ*ಲೆ ಬೆದರಿಕೆ: ದೂರು-ಕಹಳೆ ನ್ಯೂಸ್
ಪಡುಬಿದ್ರಿ: ಬಡಾ ಗ್ರಾಮದ 21 ವರ್ಷದ ಯುವತಿಯ ಇನ್ಸ್ಟಾ ಗ್ರಾಂ ಖಾತೆಗೆ ಬಡಾ ಗ್ರಾಮದ ನಿವಾಸಿ ಆಸಿಫ್ ಎಂಬಾತ ಅಶ್ಲೀಲ ಸಂದೇಶ ಕಳುಹಿಸಿ ಆಕೆಯನ್ನು ತನ್ನೊಂದಿಗೆ ಬರಹೇಳಿದ್ದಲ್ಲದೆ ಮಾ. 7ರಂದು ಕಾರಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೈಯಲ್ಲಿ ಚಾಕು ಹಿಡಿದುಕೊಂಡು ಯುವತಿಯ ಕೈಹಿಡಿದೆಳೆದು ಆಕೆಯ ಮೊಬೈಲನ್ನು ಕಸಿದು ನೆಲಕ್ಕೆಸೆದು ಒಡೆದುಹಾಕಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆಯನ್ನು ಮನೆ ಎದುರಿನ ಬಯಲಲ್ಲಿ ನಿಂತು ನೋಡುತ್ತಿದ್ದ ನಾಜಿಮ್ ಅವರ...







