ಸಶಸ್ತ್ರ ಪಡೆಗಳಿಗೆ ಸೇರಲು ದೈಹಿಕ ಸದೃಢತೆ ಮತ್ತು ಸೇವಾ ಮನೋಭಾವ ಮೂಲಭೂತ ಅಂಶಗಳು: ನಾಯಕ್ ಲೀಲಾಧರ್ ಕಡಂಬೋಡಿ -ಕಹಳೆ ನ್ಯೂಸ್
ಮೂಡುಬಿದಿರೆ : ಭಾರತೀಯ ಸೇನೆ ವಿಶ್ವದ ಅತ್ಯಂತ ಶಿಸ್ತಿನ ಮತ್ತು ಶಕ್ತಿಶಾಲಿ ಸೈನ್ಯಗಳಲ್ಲಿ ಒಂದು. ದೇಶದ ರಕ್ಷಣೆಯೊಂದಿಗೆ ಸೇನೆ ತನ್ನ ಸದಸ್ಯರಿಗೆ ವೈವಿಧ್ಯಮಯ ಅವಕಾಶಗಳನ್ನು ವೃತ್ತಿಪರ ಬೆಳವಣಿಗೆ, ಶಿಸ್ತು ಹಾಗೂ ಗೌರವದ ಜೀವನವನ್ನು ಒದಗಿಸುತ್ತದೆ. ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ನಾಯಕ್ ಶ್ರೀಯುತ ಲೀಲಾದರ್ ಕಡಂಬೋಡಿ ಅವರು ಹೇಳಿದರು. ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜರಗಿದ ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತೀಯ ಸೇನೆಯಲ್ಲಿ...







