ಪತ್ನಿಗೆ ನೇಣು ಹಾಕಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಸೈಕೋ ಪತಿ -ಕಹಳೆ ನ್ಯೂಸ್

ಬಾಗಲಕೋಟೆ: ವ್ಯಕ್ತಿಯೊಬ್ಬ ಪತ್ನಿಗೆ ನೇಣು ಹಾಕಿ ಆಕೆ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಅಮಾನವೀಯ ಘಟನೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಭಾಗ್ಯಶ್ರೀ ಜಿಗಳೂರು (23) ಕೊಲೆಯಾದ ಮಹಿಳೆ. ಆಕೆಯ ಪತಿ ಪ್ರವೀಣ್ ಜಿಗಳೂರು ಹತ್ಯೆಗೈದ ಆರೋಪಿ. ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನದ ಮೇಲೆ ಕಟ್ಟಿಗೆಯಿಂದ ಹಲ್ಲೆಗೈದು ಆಕೆಗೆ ನೇಣು ಬಿಗಿದಿದ್ದ. ಬಳಿಕ ಆಕೆ ಪ್ರಾಣಸಂಕಟದಲ್ಲಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದಾನೆ.
ಅಲ್ಲದೇ ಆಕೆ ಒದ್ದಾಡುವುದನ್ನು ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ನೇಣು ಕುಣಿಕೆ ಹಿಂದೆ ಮದುವೆ ಸಮಯದ ಇಬ್ಬರ ಹೆಸರು ಸಹ ಸೆರೆಯಾಗಿದೆ.











