Friday, April 24, 2026

ಶೃಂಗೇರಿ

ಶೃಂಗೇರಿಸುದ್ದಿ

ಶೃಂಗೇರಿ ಬಳಿ ಇಬ್ಬರನ್ನು ಕೊಂದಿದ್ದ ಆನೆ ಸೆರೆ-ಕಹಳೆ ನ್ಯೂಸ್

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ‌ ಕೆರೆಕಟ್ಟೆ ಗ್ರಾಮ ಸಮೀಪ ಕೆರೆಗದ್ದೆ ಗ್ರಾಮದ ಉಮೇಶ್‌ಗೌಡ ಹಾಗೂ ಹರೀಶಶೆಟ್ಟಿ ಅವರನ್ನು ಬಲಿ ಪಡೆದ ಒಂಟಿ ಸಲಗವನ್ನು ಕಾರ್ಕಳ ವನ್ಯಜೀವಿ ವಿಭಾಗದ ಭಗವತಿ ಬಳಿ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಕಾಡಿನಲ್ಲಿ ಸೊಪ್ಪು ತರಲು ಹೋಗಿದ್ದ ಇಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಆನೆ ದಾಳಿ ನಡೆಸಿತ್ತು. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು. ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಸ್ಥಳೀಯರು ದಿನವಿಡೀ ರಸ್ತೆ ಸಂಚಾರ ತಡೆದು ಪ್ರತಿಭಟನೆ...
ಜಿಲ್ಲೆಶೃಂಗೇರಿಸುದ್ದಿ

ಕೇರಳದಿಂದ ಬಂದು ತಾಯಿಯ ಭೇಟಿ ಮಾಡಿದ ನಕ್ಸಲ್‌ ಬಿ.ಜಿ. ಕೃಷ್ಣಮೂರ್ತಿ -ಕಹಳೆ ನ್ಯೂಸ್

ಶೃಂಗೇರಿ: ಕೇರಳದಲ್ಲಿ ಬಂಧನಕ್ಕೆ ಒಳಗಾಗಿದ್ದ ನಕ್ಸಲ್‌ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಜೈಲಿನಿಂದ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಗುರುವಾರ ಶೃಂಗೇರಿಗೆ ಕರೆತರಲಾಗಿದ್ದು 2 ಗಂಟೆ ಕಾಲ ತಾಯಿಯೊಂದಿಗೆ ಕಳೆಯಲು ಅವಕಾಶ ಕಲ್ಪಿಸಲಾಯಿತು. ನೆಮ್ಮಾರು ಗ್ರಾಮ ಪಂಚಾಯತ್‌ನ ಹೆಮ್ಮಿಗೆ ಚಂದ್ರಕಾಂತ್‌ 2004ರಲ್ಲಿ ನಕ್ಸಲರಿಂದ ಹಲ್ಲೆಗೊಳಗಾಗಿದ್ದು, ಈ ಸಂಬಂಧ 2021ರಲ್ಲಿ ಕೇರಳ ಪೊಲೀಸರಿಂದ ಕೃಷ್ಣಮೂರ್ತಿ ಬಂಧನಕ್ಕೆ ಒಳಗಾಗಿದ್ದ. ತಾಯಿ ಸುಶೀಲಮ್ಮ ಅವರನ್ನು ಭೇಟಿ ಮಾಡಬೇಕು ಎಂದು 2 ವರ್ಷದ ಹಿಂದೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು,...
ಉಡುಪಿಶೃಂಗೇರಿಸುದ್ದಿ

ಕಲ್ಕೂರ ಪ್ರತಿಷ್ಠಾನದ ಸರ್ವೋಪಯೋಗಿ ಕ್ಯಾಲೆಂಡರ್ ಪುತ್ತಿಗೆ ಶ್ರೀಗಳಿಂದ ಬಿಡುಗಡೆ-ಕಹಳೆ ನ್ಯೂಸ್

ಕಲ್ಕೂರ ಪ್ರತಿಷ್ಠಾನದಿಂದ ಮುದ್ರಿಸಲ್ಪಟ್ಟ 2025 ರ ದಿನಚರಿ ಕ್ಯಾಲೆಂಡರನ್ನು ಉಡುಪಿ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅನಾವರಣಗೊಳಿಸಿದರು. ಭಾರತೀಯ ಶಾಸ್ತ್ರಸಿದ್ಧ ರಾಷ್ಟ್ರೀಯ ಪಂಚಾಂಗ ಆಧಾರಿತ ಎಲ್ಲಾ ಮಾಹಿತಿಗಳ ಸಹಿತವಾಗಿ ರಾಷ್ಟ್ರೀಯ ಹಬ್ಬಗಳು, ರಾಷ್ಟ್ರೀಯ ದಿನಾಚರಣೆಗಳು, ಪ್ರಾದೇಶಿಕವಾದ ಧಾರ್ಮಿಕ ಕ್ಷೇತ್ರಗಳ ಉತ್ಸವಾದಿ ವಿವರಗಳನ್ನೊಳಗೊಂಡಿರುವ ಈ ಕ್ಯಾಲೆಂಡರ್ ಸರ್ವರಿಗೂ ಬಹುಪಯೋಗಿಯಾಗಿದೆ ಎಂದು ಪೂಜ್ಯಶ್ರೀಗಳು ಶ್ಲಾಘಿಸಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ,...
ಚಿಕ್ಕಮಂಗಳೂರುಶೃಂಗೇರಿಸುದ್ದಿ

ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್‌ಕೋಡ್‌ ; ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ – ಕಹಳೆ ನ್ಯೂಸ್

ಚಿಕ್ಕಮಗಳೂರು, ಸೆ.21- ಜಿಲ್ಲೆಯ ಶೃಂಗೇರಿ ಬಳಿಕ ಈಗ ಹೊರನಾಡಲ್ಲೂ ಡ್ರೆಸ್‌ ಕೋಡ್‌ ಜಾರಿಗೆ ಬಂದಿದೆ.ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್‌ ಕೋಡ್‌ ಜಾರಿ ಮಾಡಲಾಗಿದೆ.ಗಂಡಸರು ಶಲ್ಯ, ಪ್ಯಾಂಟ್‌‍, ಪಂಚೆ,ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸುವಂತೆ ಸೂಚನೆ ನೀಡಲಾಗಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದ್ದು, ಭಕ್ತರು ಸಹಕರಿಸುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ....
ಚಿಕ್ಕಮಂಗಳೂರುಶೃಂಗೇರಿಸುದ್ದಿ

ಸೇನಾ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು –ಕಹಳೆ ನ್ಯೂಸ್

ಶೃಂಗೇರಿ: ಭಾರತೀಯ ಸೇನಾ ಪರೀಕ್ಷೆ ಯಲ್ಲಿ ಫೇಲ್ ಆದ ಹಿನ್ನಲೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಭಾರತೀಯ ಸೇನೆಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ. ಇದನ್ನು ಮನೆಯವರಿಗೆ ಹೇಳುವ ಧೈರ್ಯ ನನ್ನ ಬಳಿ ಇಲ್ಲ. ಡೆತ್ ನೋಟ್ ಬರೆದಿಟ್ಟು ಕಾರ್ತಿಕ್ ನೇಣಿಗೆ ಶರಣಾಗಿದ್ದಾನೆ. ಕಾರ್ತಿಕ್ ಸೇನೆಗೆ ಸೇರಬೇಕೆಂದು 2 ವರ್ಷದಿಂದ ನಿರಂತರ ಪ್ರಯತ್ನಿಸುತ್ತಿದ್ದ. ಸೇನಾ...