ಉದ್ಯೋಗಕ್ಕೆ ಇಸ್ರೇಲ್ಗೆ ತೆರಳಬೇಕಿದ್ದ ಯುವಕ ನೇಣಿಗೆ ಶರಣು -ಕಹಳೆ ನ್ಯೂಸ್
ಮಂಗಳೂರು : ಉದ್ಯೋಗ ನಿಮಿತ್ತ ಇಸ್ರೇಲ್ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಹೊಯ್ಗೆ ಎಂಬಲ್ಲಿ ಸೋಮವಾರ ನಡೆದಿದೆ. ಉಳ್ಳಾಲ ಹೊಯ್ಗೆ ನಿವಾಸಿ, ಸೂರ್ಯಪ್ರಕಾಶ್ ಡಿ’ಸೋಜಾ (42) ಮೃತಪಟ್ಟವರು. ಕಳೆದ ಒಂದು ವರ್ಷದಿಂದ ಇಸ್ರೇಲ್ನಲ್ಲಿ ಉದ್ಯೋಗದಲ್ಲಿದ್ದ ಇವರು, ಸಹೋದರನ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಮೇ 17ರಂದು ಅವರು ಮತ್ತೆ ಇಸ್ರೇಲ್ಗೆ ಮರಳಬೇಕಿತ್ತು. ಸೋಮವಾರ ನಸುಕಿನ ಜಾವ ಸೂರ್ಯಪ್ರಕಾಶ್ ತಮ್ಮ...







