Tuesday, July 28, 2026

ಮಂಗಳೂರು

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ : ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು -ಕಹಳೆ ನ್ಯೂಸ್

ಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಬೆಳಲು ನಿವಾಸಿ ನೌಫಾಲ್ (28) ಸಾವನ್ನಪ್ಪಿದ್ದಾರೆ. ಇನ್‌ಸ್ಟಾ ಮಾರ್ಟ್‌ ಸಪ್ಲೈ ಪಾಯಿಂಟ್‌ನಲ್ಲಿ ದಿನಸಿ ವಸ್ತುಗಳನ್ನು ಲಿಫ್ಟ್‌ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದುರ್ಘಟನೆಯಾಗಿದೆ. ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಏಕಾಏಕಿ ಲಿಫ್ಟ್ ಕುಸಿದಿದೆ. ಲಿಫ್ಟ್‌ನಲ್ಲಿ ಸಿಲುಕಿ ನೌಫಾಲ್ ಸಾವಿಗೀಡಾಗಿದ್ದಾರೆ. ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕಾರಿನಲ್ಲಿ ಜಾನುವಾರುಗಳ ಹಿಂಸಾತ್ಮಕ ಸಾಗಾಟ; ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಇಬ್ಬರ ಬಂಧನ -ಕಹಳೆ ನ್ಯೂಸ್

ಮಂಗಳೂರು : ಐಷಾರಾಮಿ ಕಾರಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡಬಿದ್ರೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ಈ ಕಾರ್ಯಾಚರಣೆ ನಡೆದಿದೆ. ಮೂಡಬಿದ್ರೆ ಹಂಡೇಲು ನಿವಾಸಿ ಮಹಮ್ಮದ್ ಆರಿಫ್ ಮತ್ತು ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಬಂಧಿತ ಆರೋಪಿಗಳು. ಇವರಿಂದ ಮಾರುತಿ ಬ್ರೀಜಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ರೌಂಡ್ಸ್‌ನಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ...
ಜಿಲ್ಲೆದಕ್ಷಿಣ ಕನ್ನಡಮಂಗಳೂರು

ಕಾಂಗ್ರೆಸ್ ನಿಂದ ಶೈಕ್ಷಣಿಕ ಕ್ಷೇತ್ರದಲ್ಲೂ ಒಡೆದು ಆಳುವ ನೀತಿ : ಶಾಸಕ ಕಾಮತ್ -ಕಹಳೆ ನ್ಯೂಸ್

ಮಂಗಳೂರು : ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಹಾಗೂ ಮಕ್ಕಳಲ್ಲಿ ಏಕತೆ ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂಪಡೆಯುವ ಮೂಲಕ ಶಾಲಾ-ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವಲು ಮುಂದಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದರು. ಸಮವಸ್ತ್ರದ ಮೂಲ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಜಾತಿ-ಮತ-ಭೇದ ಮರೆಸಿ ಸಮಾನತೆಯ ಭಾವ ಮೂಡಿಸುವುದು. ಆದರೆ ಓಲೈಕೆ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರವೇ, ಧರ್ಮದ ಆಧಾರದ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ್ಕೆ ಆಕ್ಷೇಪ; ಭದ್ರತಾ ಸಿಬ್ಬಂದಿಯನ್ನ ತಳ್ಳಿ ಸ್ಪೀಕರ್ ಖಾದರ್ ಗೆ ಫೇರಾವ್, ಹನ್ನೊಂದು ಮಂದಿ ವಿರುದ್ಧ ಪ್ರಕರಣ ದಾಖಲು -ಕಹಳೆ ನ್ಯೂಸ್

ಮಂಗಳೂರು : ಕುತ್ತಾರು ಜಂಕ್ಷನ್ ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ವಿಚಾರದಲ್ಲಿ ಭದ್ರತಾ ಸಿಬ್ಬಂದಿಯನ್ನ ತಳ್ಳಿ ಸ್ಪೀಕರ್ ಯು.ಟಿ.ಖಾದ‌ರ್ ಅವರಿಗೆ ಫೇರಾವ್‌ ಹಾಕಿ ತರಾಟೆಗೈದ ಮದನಿ ನಗರದ ಜುನೈದ್ ಮತ್ತು ಆತನ ಹತ್ತು ಜನ ಸಹಚರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್‌ ಐಆ‌ರ್ ದಾಖಲಾಗಿದೆ. ಸ್ಪೀಕರ್ ಯು.ಟಿ.ಖಾದರ್ ಅವರ ಅಂಗ ರಕ್ಷಕ ಸಿಎಸ್ ಆರ್ ಘಟಕದ ಸಿಬ್ಬಂದಿ ಮೊಹಮ್ಮದ್ ಯಾಸೀನ್ ಇನಾಮದಾರ ನೀಡಿರುವ ದೂರಿನ ಆಧಾರದಡಿ ಉಳ್ಳಾಲ ಠಾಣೆಯಲ್ಲಿ ಹನ್ನೊಂದು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಲೋಕಸಭಾ ಸದಸ್ಯರ ಭೇಟಿ. -ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರನ್ನು ಸೇವಾಭಾರತಿ ತಂಡ ಮೇ 12 ರಂದು ಭೇಟಿ ನೀಡಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು ಪ್ರಸ್ತಾಪಿಸಿ ಸಹಕರಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಸೇವಾಭಾರತಿ ಅಧ್ಯಕ್ಷ ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್, ಸೇವಾಭಾರತಿಯ ಖಜಾಂಚಿ ಶ್ರೀ ಜೈ ರಾಜ್ ಸಾಲ್ಯಾನ್ ಕಾನರ್ಪ,...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕಾನ -ತೋಕೂರು -ಜೋಕಟ್ಟೆ ಕರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರಸ್ತೆ ತಡೆ -ಪ್ರತಿಭಟನೆ – ಕಹಳೆ ನ್ಯೂಸ್

ಸುರತ್ಕಲ್ : ಕಾನ -ತೋಕೂರು -ಜೋಕಟ್ಟೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿ ಹೋಗಿದ್ದು ಕೂಡಲೇ ರಸ್ತೆ ಕಾಮಗಾರಿ ನಡೆಸಿ ದುರಸ್ಥಿ ಮಾಡುವಂತೆ ಒತ್ತಾಯಿಸಿ ಇಂದು ಕಾನ ಜಂಕ್ಷನ್ ಬಳಿ ಡಿವೈಎಫ್ಐ ಕಾನ ಘಟಕ, ಆಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ನಾಗರಿಕ ಹೋರಾಟ ಸಮಿತಿ ಕಾನ ನೇತೃತ್ವದಲ್ಲಿ ಇಂದು ರಸ್ತೆ ತಡೆ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಬೈಕಂಪಾಡಿ ಮೊಬೈಲ್ ಅಂಗಡಿ ಕಳವು ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಸ್ಸಾಂ ಮೂಲದ ಆರೋಪಿ ಬಂಧನ -ಕಹಳೆ ನ್ಯೂಸ್

ಮಂಗಳೂರು : ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕಳವು ನಡೆಸಿ ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪಣಂಬೂರು ಪೊಲೀಸರು ಕೇರಳದ ಮಂಜೇಶ್ವರದಲ್ಲಿ ಬಂಧಿಸಿದ್ದಾರೆ. ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ (34) ಬಂಧಿತ ಆರೋಪಿ. ಈತ 2018ರಲ್ಲಿ ಮಂಗಳೂರು ತಾಲ್ಲೂಕಿನ ಬೈಕಂಪಾಡಿಯ ಕುಡುಂಬೂರು ಎಂಬಲ್ಲಿರುವ ‘ಪೂಜಾ ಮೊಬೈಲ್ಸ್’ ಅಂಗಡಿಯ ಬೀಗ ಮುರಿದು ಸುಮಾರು ₹2.17 ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳು,...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ -ಕಹಳೆ ನ್ಯೂಸ್

ಮಂಗಳೂರು :  ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಮರೆತು ಬಿಟ್ಟಿದ್ದ ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಮಂಗಳೂರು ಪೂರ್ವ (ಕದ್ರಿ) ಠಾಣೆಯ ಪೊಲೀಸರು ಮತ್ತು ಆಟೋ ಚಾಲಕನ ಪ್ರಾಮಾಣಿಕತೆಯಿಂದ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.ಮಂಗಳೂರು ಪ್ರವಾಸ ಮಾರ್ಗದರ್ಶಿ ಮಲ್ಲಿಕಟ್ಟೆ ನಿವಾಸಿ ಶ್ರೀಮತಿ ಲೋಲಿಟ್ಟ ಹಾಗೂ ಅವರ ಕುಟುಂಬದವರು ಮಲ್ಲಿಕಟ್ಟೆಯಿಂದ ಮೇರಿ ಹಿಲ್ ಕಡೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಚಿನ್ನಾಭರಣಗಳಿದ್ದ ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಅವರು...
1 3 4 5 6 7 114
Page 5 of 114