ಬೈಂದೂರಿನಲ್ಲಿ ಆಧ್ಯಾತ್ಮದ ಅಲೆ ಗೋಳಿಹೊಳೆಯಲ್ಲಿ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ 48 ದಿನಗಳ ಚಾತುರ್ಮಾಸ್ಯ ಮಹೋತ್ಸವಕ್ಕೆ ಸಿದ್ಧತೆ -ಕಹಳೆ ನ್ಯೂಸ್
ಬೈಂದೂರು: ಆಧ್ಯಾತ್ಮಿಕ ಲೋಕದಲ್ಲಿ ಕುಂಭಮೇಳಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಪಾವಿತ್ರ್ಯತೆಯೊಂದಿಗೆ ಬೈಂದೂರು ಕ್ಷೇತ್ರದ ಗೋಳಿಹೊಳೆಯಲ್ಲಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 48 ದಿನಗಳ ಚಾತುರ್ಮಾಸ್ಯ ವ್ರತಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜುಲೈ 28 ರಿಂದ ಆರಂಭವಾಗಲಿರುವ ಈ ಅನುಷ್ಠಾನವು ಬೈಂದೂರಿನ ಪಾಲಿಗೆ ಆಧ್ಯಾತ್ಮಿಕ ಕುಂಭಮೇಳದಂತಹ ಭವ್ಯ ಅನುಭವವನ್ನು ನೀಡಲಿದೆ. ಈ ಮಹೋನ್ನತ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಗೋಳಿಹೊಳೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಚಿವರಾದ ಮಾಂಕಾಳ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ...







