ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ನಾಮಪತ್ರ ಸಲ್ಲಿಕೆ- -ಕಹಳೆ ನ್ಯೂಸ್
ಕಾಪು ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ನಾಮಪತ್ರ ಸಲ್ಲಿಸಿದರು. ಸಹಸ್ರ–ಸಹಸ್ರ ಸಂಖ್ಯೆಯಲ್ಲಿ ಕಾಪು ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ನಾಯಕರ ಜೊತೆಗೂಡಿ ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದಿಂದ ಕಾಪು ತಾಲೂಕು ಕಚೇರಿಗೆ ತೆರಳಿದ ಗುರ್ಮೆ ಸುರೇಶ್ ಶೆಟ್ಟಿ ತಮ್ಮ ನಾಮಪತ್ರ ಸಲ್ಲಿಸಿದರು. ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವು ನಮ್ಮದೇ ಎಂಬ ಅಭಿಮಾನಿ ಕಾರ್ಯಕರ್ತರ ನಂಬಿಕೆ ಮತ್ತು ವಿಶ್ವಾಸ ತಮ್ಮಲ್ಲಿ ಅಪಾರ ಶಕ್ತಿಯನ್ನು ತುಂಬಿದೆ...







