Monday, April 27, 2026

ರಾಜಕೀಯ

ರಾಜಕೀಯಸುದ್ದಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: 2019 ರ ಲೋಕಸಭೆ ಚುನಾವಣೆಗೆ ಯಾವುದೇ ಪ್ರಭಾವ ಬೀರದು: ಅರುಣ್ ಜೇಟ್ಲಿ – ಕಹಳೆ ನ್ಯೂಸ್

ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕಹಿಯನ್ನು ಅನುಭವಿಸಿದೆ. ಮುಂದಿನ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರೋ ಈ ಎಲೆಕ್ಷನ್ ರಣರಂಗ ಈ ಫಲಿತಾಂಶ ಲೋಕಸಭೆ ಚುನಾವಣೆಗೆ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿಬರುತ್ತಿದ್ದಂತೆ ಅದನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿ ಹಾಕಿದ್ದಾರೆ. 2019 ರ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಯಾವುದೇ ಪ್ರಭಾವ ಬೀರದು. ಕೇಂದ್ರ ಸರ್ಕಾರದ ಕಾರ್ಯ ಆಧರಿಸಿಯೇ ಲೋಕಸಭೆ ಚುನಾವಣೆ ಫಲಿತಾಂಶ...
ರಾಜಕೀಯ

BIG BREAKING NEWS : ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮೇಲೆ ಹಲ್ಲೆ: ರೈ ಬಂಟರ ರೌಡಿಸಂ – ಕಹಳೆ ನ್ಯೂಸ್

ಬಂಟ್ವಾಳ : ಪೂರ್ವ ನಿಗದಿಯಂತೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಶಾಸಕ ರಾಜೇಶ್ ನಾೈಕ್ ಆಗಮಿಸಿದ್ದರು. ಇವರು ಆಗಮನದಿಂದ ಕೋಪಗೊಂಡ ಮಾಜಿ ಶಾಸಕ ರಮಾನಾಥ ರೈ ಬಂಟರು ಪುಂಡಾಟಿಕೆ ಮೆರೆದಿದ್ದಾರೆ. ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲೇ ಇದ್ದರೂ ಕೂಡ ಕೈ ಕಟ್ಟಿಕುಳಿತ್ತಿದ್ದಾರೆ. ಗೂಂಡಾಗಿರಿ ಪ್ರವ್ರತ್ತಿಯಿಂದ ಸರಕಾರಿ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ. ಜಿ.ಪಂ.ಸದಸ್ಯ ಹಾಗೂ ಅವರ ಬೆಂಬಲಿಗರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು...
ರಾಜಕೀಯಸುದ್ದಿ

ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಯತ್ನಿಸಿದೆ: ಮಾಜಿ ಸಿಎಂ – ಕಹಳೆ ನ್ಯೂಸ್

ಮಂಗಳೂರು: ರಾಜ್ಯ ರಾಜಕೀಯದಲ್ಲಿ ಅದೆಷ್ಟೋ ಗೊಂದಲವಿದ್ರೂ ಕೂಡ ಮೈತ್ರಿ ಸರ್ಕಾರ ಪ್ರತಿಪಕ್ಷವನ್ನು ಹೀಯಾಳಿಸೋದು ಮಾತ್ರ ಬಿಟ್ಟಿಲ್ಲ. ಇದಕ್ಕೆ ಪೂರಕವೆಂಬಂತೆ ಮಂಗಳೂರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಮಲ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪಕ್ಷ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಯತ್ನಿಸ್ತಿದ್ದಾರೆ. ಈಗಾಗ್ಲೇ ಒಂದ್ಸಾರಿ ಫೈಲ್ ಆಗಿದ್ದಾರೆ. ಯಡಿಯೂರಪ್ಪ 104 ಸ್ಥಾನ ಇಟ್ಟುಕೊಂಡು ಮೆಜಾರಿಟಿ ಪ್ರೂವ್ ಮಾಡಕ್ಕಾಗಿಲ್ಲ ಈಗ ಮತ್ತೆ ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು....
ರಾಜಕೀಯಸುದ್ದಿ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಬೆಂಬಲ ಸೂಚಿಸಿದ ವ್ಯಕ್ತಿ ಮೇಲೆ ಹಲ್ಲೆ – ಕಹಳೆ ನ್ಯೂಸ್

ಮಲಪ್ಪುರಂ: ಶಬರಿಮಲೆಗೆ ಹೋಗಿ ಅಯ್ಯಪ್ಪಸ್ವಾಮಿಯ ದರ್ಶನ ಮಾಡಲು ತಮಗೂ ಹಕ್ಕಿದೆ ಎಂದು ಸುದ್ದಿಗೋಷ್ಠಿ ನಡೆಸಿದ್ದ ಮೂವರು ಮಹಿಳೆಯರಿಗೆ ಬೆಂಬಲ ನೀಡಿದ್ದ ಮಲಪ್ಪುರಂನ 33 ವರ್ಷದ ಸಂಗೀತ್​ ಮೇಲೆ 30 ಜನ ದಾಳಿ ನಡೆಸಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಬೆಂಬಲ ಸೂಚಿಸಿದ್ದ ವ್ಯಕ್ತಿಯ ಮೇಲೆ 30 ಜನರು ಹಲ್ಲೆ ನಡೆಸಿರುವ ಘಟನೆ ಮಲಪ್ಪುರಂನ ನೀಲಾಂಬುರ್​ನಲ್ಲಿ ನಡೆದಿದೆ. ನವೆಂಬರ್​ 19ರಂದು ಎರ್ನಾಕುಲಂ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಹಿಳೆಯರೊಂದಿಗೆ ಸಂಗೀತ್​ ಕೂಡ ಭಾಗವಹಿಸಿದ್ದರು. ನವೆಂಬರ್​...
ರಾಜಕೀಯಸುದ್ದಿ

ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನವಾಗುತ್ತದೆ: ಈಶ್ವರಪ್ಪ – ಕಹಳೆ ನ್ಯೂಸ್

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು. ಹುಬ್ಬಳ್ಳಿಯಲ್ಲಿ ತಮ್ಮನ್ನ ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಸರಕಾರಕ್ಕೆ ಆಪತ್ತು ಬರಬಹುದು ಎಂಬ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುತಿಲ್ಲ ರಾಜ್ಯದ ಹಿತರಕ್ಷಣೆ ಕಾಂಗ್ರೆಸ್ ನಾಯಕರಿಗೆ ಬೇಕಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಯಾವುದೇ ಆಪರೇಷನ್ ಕಮಲ...
ರಾಜಕೀಯ

ಕಬ್ಬು ಬೆಳೆಗಾರರ ಕುರಿತು ಸಿಎಂ ಹೇಳಿಕೆ ವಿರುದ್ಧ ಕಿಡಿ ಕಾರಿದ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಕಬ್ಬು ಬೆಳೆಗಾರರ ಕುರಿತು ಮುಖ್ಯಮಂತ್ರಿಯವರ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಕಿಡಿ ಕಾರಿದರು. ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ರೈತರ ಸಮಸ್ಯೆ ಬಗೆಹರಿಸುವುದು ಬಿಟ್ಟು ನೊಂದ ರೈತರಿಗೆ ಬರೆ ಎಳೆಯುತ್ತಿರುವುದು ನಿಜಕ್ಕೂ ಖಂಡನೀಯ ಘಟನೆಯಾಗಿದೆ. ಚುನಾವಣೆಯಲ್ಲಿ ತನಗೆ ಮತ ನೀಡಿಲ್ಲ ಎನ್ನುವ ಕೋಪವನ್ನು ಅಧಿಕಾರ ಹಿಡಿದ ಮೇಲೆ ಕುಮಾರಸ್ವಾಮಿಯವರು ಜನ ಸಾಮಾನ್ಯರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕುಮಾರಸ್ವಾಮಿಯವರು ಕೇವಲ ಅವರ ಪಕ್ಷದ ಮತದಾರರಿಗೆ ಮಾತ್ರ ಮುಖ್ಯಮಂತ್ರಿಯೇ...
ರಾಜಕೀಯಸುದ್ದಿ

ಮೊದಲು ರೈತರ ಸಮಸ್ಯೆ ಬಗೆಹರಿಸಿ, ರಾಜ್ಯ ಸರ್ಕಾರಕ್ಕೆ ಬಿಎಸ್​ವೈ ಎಚ್ಚರಿಕೆ – ಕಹಳೆ ನ್ಯೂಸ್

ಬೆಂಗಳೂರು:  ಸಿಎಂ ಆದಷ್ಟು ಬೇಗ ರೈತರಿಗೆ ಕಬ್ಬಿನ ಬಾಕಿ ಕೊಡಿಸುವ ತೀರ್ಮಾನ ಮತ್ತು ಕಬ್ಬಿಗೆ ಬೆಂಬಲ ಬೆಲೆ ನೀಡದೇ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಮೊದಲು ರೈತರ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದುವೇಳೆ ಸಿಎಂ ಆದಷ್ಟು ಬೇಗ ರೈತರಿಗೆ ಕಬ್ಬಿನ ಬಾಕಿ ಕೊಡಿಸುವ ತೀರ್ಮಾನ ಮತ್ತು ಕಬ್ಬಿಗೆ ಬೆಂಬಲ ಬೆಲೆ ನೀಡದೇ ಇದ್ದರೆ ರಾಜ್ಯಾದ್ಯಂತ ಉಗ್ರ...
ರಾಜಕೀಯ

ಮೂರನ್ನೂ ಬಿಟ್ಟವರು, ಮುಂದಾಳುಗಳು; ಅನಂತ್ ಕುಮಾರ್ ಹೆಗ್ಡೆ – ಕಹಳೆ ನ್ಯೂಸ್

ಬೆಂಗಳೂರು: ಶಬರಿಮಲೆ ಕುರಿತಂತೆ ಹಲವಾರು ರಾಜಕಾರಣಿಗಳು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಸುಪ್ರೀಂ ಕೋರ್ಟಿನ ನಿರ್ಧಾರ, ಆಗುತ್ತಿರುವ ಬೆಳವಣಿಗೆ ಬಗ್ಗೆ ಗ್ರಾಮೀಣ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗ್ಡೆ ತಮ್ಮ ಫೇಸ್‍ಬುಕ್ ಖಾಯೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಶಬರಿಮಲೆ ಅಯ್ಯಪ್ಪನ ದೇವಸ್ಥಾನದಲ್ಲಿ ಪ್ರವೇಶ ಪಡೆಯಬೇಕೆಂದು ಬಯಸಿ ಮುಂದೆ ಬಂದ ಮಹಿಳೆಯರ ಶ್ರದ್ಧೆ ಭಕ್ತಿಗಳನ್ನು, ಅವರ ಹೆಸರು ಮತ್ತು ಇತಿಹಾಸಗಳೇ ಹೇಳುತ್ತವೆ. ಮುಂದೆ ಬಂದ ಮೂವರಲ್ಲಿ ಒಬ್ಬರು ರೆಹಾನಾ ಫಾತಿಮಾ. ಪರಂಪರೆಯಿಂದ ಅವರು ಅಯ್ಯಪ್ಪನ...
1 200 201 202 203 204 232
Page 202 of 232