ರಾಜ್ಯ ಸರ್ಕಾರ ದತ್ತಪೀಠ ವಿವಾದವನ್ನು ರಾಜಕೀಯಗೊಳಿಸದೆ ವಾಸ್ತವ ನೆಲೆಯಲ್ಲಿ ಪರಿಹರಿಸಲಿ ; ದತ್ತಪೀಠದಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ – ಕಹಳೆ ನ್ಯೂಸ್
ಚಿಕ್ಕಮಗಳೂರು: ರಾಜ್ಯ ಸರ್ಕಾರ ದತ್ತಪೀಠ ವಿವಾದವನ್ನು ರಾಜಕೀಯಗೊಳಿಸದೆ ವಾಸ್ತವ ನೆಲೆಯಲ್ಲಿ ಪರಿಹರಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು. ದತ್ತಮಾಲಾ ಅಭಿಯಾನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧಾರ್ವಿುಕ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷದ ಹಿಂದೆ ದೇಶದ ಹಿಂದು ದೇವಾಲಯಗಳ ಮೇಲೆ ಮುಸ್ಲಿಂ ರಾಜರು ದಾಳಿ ಮಾಡಿ ಮಸೀದಿ ಕಟ್ಟಿದ್ದಾರೆ. ಇದರಲ್ಲಿ ದತ್ತಪೀಠವೂ ಒಂದು. ದತ್ತಾತ್ರೇಯ ಗುರು ತಪಸ್ಸು ಮಾಡಿದ ಜಾಗ ಬಾಬಾಬುಡನ್ ಅತಿಕ್ರಮಣವಾಗಿದೆ. ಇದು...







