Wednesday, April 29, 2026
ರಾಜಕೀಯ

Breaking News : CAA & NRC ವಿರೋಧಿ ಪ್ರತಿಭಟನೆ ವೇಳೆ ಅಡ್ಯಾರಿನಲ್ಲಿ ಮಹೇಶ್ ಬಸ್ಸಿನ‌ ಮೇಲೇರಿ ಕೊಲೆ ಬೆದರಿಕೆ‌ ಹಾಗೂ ಪ್ರಚೋದನಕಾರಿ ಘೋಷಣೆ ಕೂಗಿದ ದುರ್ಘಟನೆ ; ಮಂಗಳೂರಿನಲ್ಲಿ ಎಫ್.ಐ.ಆರ್. ದಾಖಲು – ಕಹಳೆ ನ್ಯೂಸ್

ಮಂಗಳೂರು : ಅಡ್ಯಾರ್ ನಲ್ಲಿ ನಡೆದ CAA,NRC ,NPR ವಿರೋಧಿ ಪ್ರತಿಭಟನಾ ಸ್ಥಳವಾದ ಕಣ್ಣೂರಿನಲ್ಲಿ ಮಹೇಶ್ ಬಸ್ಸಿನ ಮೇಲ್ವಾಗದ ಕ್ಯಾಬಿನ್ ನಲ್ಲಿ ನಿಂದ ಯುವರ ಗುಂಪೊಂದು ಮೋದಿ, ಅಮಿತ್ ಶಾ, ಆರ್.ಎಸ್.ಎಸ್, ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಅವಾಚ್ಯವಾಗಿ ನಿಂದಿಸಿ ಅಲ್ಲದೆ, ಪೋಲಿಸರ ಕೈ ಕಡಿಯುತ್ತೇವೆ, ಕಾಲು ಕಡಿಯುತ್ತೇವೆ. ಅಗತ್ಯ ಬಿದ್ದರೆ ತಲೆಯು ಕಡಿಯುತ್ತೇವೆ ಎಂದು ಕೊಲೆ ಬೆದರಿಕೆ ಸಮಾಜ ಘಾತುಕ ಘೋಷಣೆಯನ್ನು ಕೂಗಿದ್ದ ಪ್ರಕರಣ ನಡೆದಿದ್ದು, ಇದನ್ನು ಪ್ರತ್ಯಕ್ಷವಾಗಿ ಕಂಡ ಚೇತನ್ ಎಂಬ ಯುವಕ ‌ಕಂಕನಾಡಿ‌ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೂರು ಸ್ವೀಕರಿಸಿದ ಪೋಲೀಸರು 143, 147, 504, 506, 153 ( A) ಹಾಗೂ 149 ರಂತೆ ಎಫ್ ಐ‌ ಆರ್ ದಾಖಲುಮಾಡಿದ್ದಾರೆ.

ಕೊಲೆ ಬೆದರಿಕೆ ಒಡ್ಡಿ,ಗಲಭೆಗೆ ಪ್ರಚೋದಿಸುವ ಘೋಷಣೆ ಕೂಗಿದ ಯುವಕರನ್ನು ಬಂಧಿಸಲು ಮಂಗಳೂರು ನಗರ ಪೋಲೀಸ್ ಕಮಿಷನರ್ ಡಾ. ಹರ್ಷಾ ನೇತೃತ್ವದ ತಂಡ ಬಲೆ ಬೀಸಿದೆ.