ತಬ್ಲೀಘಿನದ್ದು ವೈರಸ್ ಜಿಹಾದಾ? ಕೊರೊನಾ ವೈರಸ್ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆ ; ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅನಂತಕುಮಾರ ಹೆಗಡೆ – ಕಹಳೆ ನ್ಯೂಸ್
ಶಿರಸಿ: ಕೊರೊನಾ ವೈರಸ್ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ. ಇಸ್ಲಾಮ್ ರಾಜಕಾರಣ!!! ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೋನಾ ಎಂಬ ಮಹಾಮಾರಿಯಂಥ...







