ಸಾಮಾಜಿಕ ಅಂತರ ಎಂದರೇನು? ಲಾಕ್’ಡೌನ್ ಪಕ್ಕಕ್ಕಿಟ್ಟು ಭರ್ಜರಿ ಬರ್ತ್’ಡೇ ಆಚರಿಸಿಕೊಂಡ ತುರುವೇಕೆರೆ ಶಾಸಕ ಮಸಾಲೆ..! – ಕಹಳೆ ನ್ಯೂಸ್
ಬೆಂಗಳೂರು: ದೇಶದಾದ್ಯಂತ ಕೊರೋನಾ ವೈರಸ್ ಲಾಕ್'ಡೌನ್ ಜಾರಿಯಲ್ಲಿದ್ದರೂ, ಸಾಮಾಜಿಕ ಅಂತರವೆಂದರೇನು ಎಂಬುದೇ ಅರಿಯದಂತೆ ಸುಮಾರು 500 ಮಂದಿಯನ್ನು ಸೇರಿಸಿಕೊಂಡ ಶಾಸಕರೊಬ್ಬರು ಭರ್ಜರಿ ಬರ್ತ್'ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ. ತುರುವೇಕೆರೆ ಶಾಸಕ ಮಸಾಲೆ ಜಯ.ರಾಮ್ ಅವರು ತಮ್ಮ ಹುಟ್ಟುಹಬ್ಬವನ್ನು ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಇಡಗೂರಿನಲ್ಲಿ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಣೆ ವೇಳೆ ಶಾಸಕ ಲಾಕ್'ಡೌನ್ ಉಲ್ಲಂಘಿಸಿದ್ದು, ಇಡಗೂರು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಸಿದ್ದಾರೆ....







