
ಬೆಂಗಳೂರು, ಎ.14 : ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮಾಡಲಾಗಿದ್ದು ಎಲ್ಲಾ ಹಬ್ಬ, ಸಡಗರದ ದಿನಗಳು ಕಳೆಗುಂದಿದೆ. ಇಂದು ಮಂಗಳೂರಿನಲ್ಲಿ ಬಿಸು ಸಂಭ್ರಮವಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಶುಭ ದಿನಕ್ಕೆ ತುಳು ಭಾಷೆಯಲ್ಲಿ ಶುಭಾಷಯ ಕೋರಿದ್ದಾರೆ.

ಜನತೆಗೆ ಶುಭಾಕೋರಿ ಟ್ವೀಟ್ ಮಾಡಿರುವ ಅವರು, “ಬಿಸುವಿನ ದಿನ ಹೊಸ ಕನಸು, ಹೊಸ ಮನಸು, ಹೊಸ ತಿನಿಸು, ಎಲ್ಲವೂ ಹೊಸತಾಗಲಿ. ಈ ಹೊಸ ವರ್ಷದಲ್ಲಿ ಹಳೆಯ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೆ ಬಿಸುವಿನ ಶುಭಾಶಯಗಳು” ಎಂದು ತುಳು ಭಾಷೆಯಲ್ಲಿ ಹೇಳಿದ್ದಾರೆ.
ಬಿಸುತ ದಿನ ಪೊಸತ್ ಮನಸ್
ಪೊಸತ್ ಕನಸ್ ಪೊಸತ್ ತೆನಸ್
ಮಾತಲಾ ಪೊಸತ್ ಪೊಸತ್ ಆವಡ್
ಪೊಸ ವರ್ಷೊಡು ಪರತ್ ಮಹಾಮಾರಿ
ದೂರ ಅದ್ ಸುಖ ಸಂತೋಸ ನೆಲೆಸಡ್
ಮಾತೆರೆಗ್ ಬಿಸುತ ಸುಭಾಸುಯೊಲು. 1/2— CM of Karnataka (@CMofKarnataka) April 14, 2020
ಹಾಗೆಯೇ ಆ ಬಳಿಕ ಕನ್ನಡದಲ್ಲಿ ಟ್ವೀಟ್ ಮಾಡಿದ್ದು ಸೌರ ಸಂವತ್ಸರ,’ ‘ಸ್ಥಿರ ಸಂವತ್ಸರ’ ಎಂದು ಕರೆಯಲಾಗುವ ‘ವಿಷು’ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ಈ ಸೌರಮಾನ ಯುಗಾದಿಯು, ಎಲ್ಲರ ಬಾಳಿನಲ್ಲೂ ಸುಖ, ಸಂತೋಷಗಳನ್ನು ತರಲಿ ಎಂದು ಶುಭ ಕೋರಿದ್ದಾರೆ.











