ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯಥಾಸ್ಥಿತಿಯಲ್ಲಿ ಕ್ಷಯ ಬಾಧಿತರ ಸಂಖ್ಯೆ ; ಕ್ಷಯ ನಿರ್ಮೂಲನೆ ಇಲಾಖೆಗೆ ಸವಾಲು – ಕಹಳೆ ನ್ಯೂಸ್
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕ್ಷಯ ರೋಗ ಸೋಂಕಿತರ ಪ್ರಕರಣಗಳು ಯಥಾಸ್ಥಿತಿಯಲ್ಲಿವೆ. ಒಂದು ವರ್ಷ ಸ್ವಲ್ಪ ಕಡಿಮೆಯಾದರೆ, ಮತ್ತೂಂದು ವರ್ಷ ಏರಿಕೆಯಾಗುತ್ತಿದ್ದು, ಸಂಪೂರ್ಣ ಕ್ಷಯ ನಿರ್ಮೂಲನೆ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ 2030ರೊಳಗೆ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವ ಉದ್ದೇಶ ಹೊಂದಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯ ಇಲಾಖೆಗಳ ಮೂಲಕ ಕಾರ್ಯಪ್ರವೃತ್ತವಾಗಿವೆ. ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಕ್ಷಯ ಕಾಣಿಸಿಕೊಂಡಿರುವುದೂ ಇದೆ....







