ಅಳ್ವಾಸ್ ವಿರಾಸತ್‌ನಲ್ಲಿ ಸಂಗೀತ ರಸಧಾರೆ ; ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಳ್ ಹಾಡಿಗೆ ಪ್ರೇಕ್ಷಕರು ಮಂತ್ರಮುಗ್ಧ – ಕಹಳೆ ನ್ಯೂಸ್
ಮೂಡುಬಿದಿರೆ: ಅಬ್ಬರದ ಹಾಡುಗಳು, ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ, ಬಣ್ಣ ಬಣ್ಣದ ಬೆಳಕಿನ ಚಿತ್ತಾರ, ಮುಗಿಲು ಮುಟ್ಟಿದ ಪ್ರೇಕ್ಷಕರ ಹರ್ಷೋದ್ಘಾರ, ಕರತಾಡನ…. ಇದು ಪುತ್ತಿಗೆ ವಿವೇಕಾನಂದ ನಗರ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಜರಗಿದ ಅಳ್ವಾಸ್ ವಿರಾಸತ್‌ನಲ್ಲಿ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಳ್ ಅವರಿಂದ ಪ್ರಸ್ತುತಗೊಂಡ ಗಾನ ವೈಭವದ ಒಂದು ಝಲಕ್. ವೇದಿಕೆಗೆ ಆಗಮಿಸುತ್ತಿದ್ದಂತೆ “ಲೋ ಚಾಹೆ ಉಲ್ಫತ್’ ಹಾಡಿನ ಮೂಲಕ...







