ಈ ವರ್ಷದ ಪದವಿ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಂಗಳೂರು ನಗರದ ಕಾಲೇಜಿನಲ್ಲಿ ನಡೆಸುವಂತೆ ಕುಲಪತಿಗಳಿಗೆ ಒತ್ತಾಯಿಸಿದ ಮಾಜಿ ಸಿಂಡಿಕೆಟ್ ಸದಸ್ಯ ಎಸ್.ಆರ್ ಹರೀಶ್ ಆಚಾರ್ಯ – ಕಹಳೆ ನ್ಯೂಸ್
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳ ಗಂಗೋತ್ರಿಯ ಕೊಣಾಜೆ ಕ್ಯಾಂಪಸ್ಸಿನಲ್ಲಿ ಈ ಸಾಲಿನ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ನಡೆಸಲು ನಿರ್ಧರಿಸಿದ್ದು, ಮೌಲ್ಯಮಾಪಕ ಅಧ್ಯಾಪಕರು ತಮಗೆ ಸಮಯವಕಾಶ ಸಿಕ್ಕಾಗ ಕೊಣಾಜೆಗೆ ಬಂದು ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳುವಂತೆ ತೀರ್ಮಾನಿಸಿತ್ತು. ಆದರೆ ವಿಶ್ವವಿದ್ಯಾನಿಲಯವು ಮೌಲ್ಯಮಾಪನ ಕಾರ್ಯವನ್ನು ತಾನು ಅಳವಡಿಸಿಕೊಂಡಿರುವ ನೀತಿ ನಿಯಮಗಳಡಿಯಲ್ಲಿಯೇ ನಡೆಸಬೇಕು ಮತ್ತು ಮಂಗಳೂರು ನಗರದ ಯಾವುದಾದರೂ ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ...







