ಬಳ್ಳಾರಿ ಚಲೋ – 2ನೇ ದಿನವೂ ಪಾದಯಾತ್ರೆಗೆ ಹರಿದು ಬಂದ ಕಾರ್ಯಕರ್ತರ ದಂಡು – ಕಹಳೆ ನ್ಯೂಸ್
ರಾಯಚೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಎರಡನೇ ದಿನವೂ ಕಾರ್ಯಕರ್ತರ ದಂಡು ಹರಿದು ಬರುತ್ತಿದೆ. ಎರಡನೇ ದಿನ ಸಂತೆಕೆಲ್ಲೂರಿನ ಘನಮಠೇಶ್ವರ ಮಠದಿಂದ ಗುಡದೂರಿಗೆ 21 ಕಿ.ಮೀ ಪಾದಯಾತ್ರೆ ನಡೆಯಲಿದ್ದು ಪಾದಯಾತ್ರೆಯಲ್ಲಿ ಹಲವಾರು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಮಸ್ಕಿ, ಮಾನ್ವಿ, ಹುನಗುಂದ, ಕುಷ್ಟಗಿ, ಲಿಂಗಸುಗೂರು, ಮುದ್ದೇಬಿಹಾಳ ಕಾರ್ಯಕರ್ತರು ಇಂದು ಸೇರಲಿದ್ದಾರೆ. ಸಂತೆಕೆಲ್ಲೂರಿನಿಂದ ಮುದಬಾಳ ಕ್ರಾಸ್ ವರೆಗೆ ಪಾದಯಾತ್ರೆ ನಡೆದು...







