Tuesday, October 27, 2026
ಸುದ್ದಿ

ಸಜಿಪಮುನ್ನೂರು: ₹20 ಲಕ್ಷ ವೆಚ್ಚದ ಮಾರ್ನಬೈಲ್–ಕಾನ್ಸಾಲೆ ರಸ್ತೆ ಉದ್ಘಾಟನೆ – ಕಹಳೆ ನ್ಯೂಸ್

ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್–ಕಾನ್ಸಾಲೆ ಸಂಪರ್ಕ ರಸ್ತೆಯನ್ನು ₹20 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸಿದರು.

ಜಾಹೀರಾತು

ಗ್ರಾಮೀಣ ಭಾಗದ ಜನರಿಗೆ ಸುಗಮ ಸಂಚಾರದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ರಸ್ತೆ ಸಂಪರ್ಕ ಸುಧಾರಣೆಯಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಹರ್ಷಿತ್, ಮಂಜುನಾಥ್ ಪುರುಷ, ಪ್ರವೀಣ್, ಸಂದೇಶ್ ಎಂ., ವರ್ಷಿತ್, ಸಂದೇಶ್ ಜಿ., ಮೋಹನ್ ಮೇಸ್ತ್ರಿ, ಅಶ್ವಿನ್ ಮೆಲ್ಕಾರ್, ವಿಕ್ರಂ, ದಯಾನಂದ ಬಿ.ಎಂ., ನಿತೇಶ್ ಕ್ರ್ಯಾಷ್ಟ, ಹರೀಶ್ ತಾರಬರಿ, ನಿತಿನ್, ನಾರಾಯಣ ಪೂಜಾರಿ, ರೇವತಿ, ಭಾರತಿ, ರೂಪೇಶ್ ಆಚಾರ್ಯ, ಕಲ್ಯಾಣಿ, ಗುತ್ತಿಗೆದಾರರಾದ ಮನೋಹರ್ ಕರ್ಕೇರ ಹಾಗೂ ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಅಂಚನ್, ಸುಮತಿ ಎಸ್., ಅನಿತಾ ಮತ್ತು ಸರೋಜಿನಿ ಸೇರಿದಂತೆ ಸ್ಥಳೀಯ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.