
ಬಳ್ಳಾರಿ: ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ನಕಲಿ ಬಂದೂಕು ಹಿಡಿದು ರೀಲ್ಸ್ ಮಾಡಿದ್ದ ಮೂವರನ್ನು ಯುವಕರನ್ನು ಬಳ್ಳಾರಿಯ ಕೌಲ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಸಾಹಿಲ್, ವಿಕಾಸ್ ಹಾಗೂ ಅಭಿಷೇಕ್ ಬಂಧಿತ ಆರೋಪಿಗಳು. ನಗರದ ಬಂಡಿಹಟ್ಟಿ ಬಳಿಯ ಹೆಚ್‌ಎಲ್‌ಸಿ ಕಾಲುವೆ ಮೇಲೆ ಭಯ ಹುಟ್ಟಿಸುವ ರೀತಿ ಆರೋಪಿಗಳು ರೀಲ್ಸ್ ಮಾಡಿದ್ದರು.
ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಹಿಡಿದುಕೊಂಡು ರೀಲ್ಸ್ ಮಾಡಿದ್ದರು. ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡು ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೀಲ್ಸ್ ಮಾಡಲು ಬಳಕೆ ಮಾಡಿದ್ದ ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.









