ಛಾಯಾಗ್ರಾಹಕರು ಎಲ್ಲರೊಂದಿಗೆ ಬೆರೆತು ತಮ್ಮ ಕಷ್ಟಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ ಉತ್ತಮ ಸೇವೆ ನೀಡುವ ಶ್ರಮ ಜೀವಿಗಳು ; ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ -ಕಹಳೆ ನ್ಯೂಸ್
ಕಾಪು : ಸಂಘಟನೆಗಳು ಒಂದು ಕುಟುಂಬ ವಾಗಿ ನಿಂತು ಸಹಕರಿಸಿದಾಗ ಮಾತ್ರ ಉದ್ದೇಶಗಳಿಗೆ ಫಲ ಬರುವುದು. ಛಾಯಾಗ್ರಾಹಕರು ಎಲ್ಲರೊಂದಿಗೆ ಬೆರೆತು ತಮ್ಮ ಕಷ್ಟಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ ಉತ್ತಮ ಸೇವೆ ನೀಡುವ ಶ್ರಮ ಜೀವಿಗಳು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯ ಪಟ್ಟರು. ಕಾಪು ಕೆ-ವನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ 2025- 27 ಸಾಲಿನ ನೂತನ ಅಧ್ಯಕ್ಷ ಸಂತೋಷ್ ನಾಯ್ಕ...







