ತಾಯಿ ಮಡಿಲಲ್ಲಿದ್ದ ಕಂದಮ್ಮನ ಮೇಲೆ ಬಿದ್ದ ತೆಂಗಿನಕಾಯಿ : ಮಗು ದುರಂತ ಸಾವು – ಕಹಳೆ ನ್ಯೂಸ್
ಉಡುಪಿ: ತಾಯಿಯ ಮಡಿಲಲ್ಲಿದ್ದ ಕಂದಮ್ಮನ ಮೇಲೆ ತೆಂಗಿನಕಾಯಿ ಬಿದ್ದು, ಮಗು ದುರಂತ ಸಾವು ಕಂಡಿರುವ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಒಂದೂವರೆ ವರ್ಷದ ದಕ್ಷ ಮೃತ ಮಗು. ಬ್ರಹ್ಮಾವರ ತಾಲೂಕು ಚಾಂತಾರು ಹೆರಂಜಾಲು ಗ್ರಾಮದಲ್ಲಿ ಘಟನೆ ನಡೆದಿದೆ. ಕಂದಮ್ಮನ ಅಕಾಲಿಕ ಮರಣಕ್ಕೆ ಗ್ರಾಮ ಕಂಬನಿ ಮಿಡಿದಿದೆ. ಪ್ರಶಾಂತ್ ಮತ್ತು ಸುಚಿತ್ರಾ ದಂಪತಿ ಎರಡನೇ ಪುತ್ರ ದಕ್ಷ. ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತಾಯಿ ತೆಂಗಿನಮರದ ಕೆಳಗೆ ಕುಳಿತಿದ್ದರು. ಈ ವೇಳೆ, ಅಚಾನಕ್ ಆಗಿ...







