ಉಡುಪಿ ಪೇಜಾವರ ಮಠದ ನೀಲಾವರ ಗೋಶಾಲೆಯ ಹೆಸರಲ್ಲಿ ಅನಧಿಕೃತ ದೇಣಿಗೆ ಸಂಗ್ರಹ : ನೀಲಾವರ ಗೋವರ್ಧನಗಿರಿ ಟ್ರಸ್ಟ್ನ ಸದಸ್ಯ ವಜಾ -ಕಹಳೆ ನ್ಯೂಸ್
ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣದ ಬೆನ್ನಲ್ಲೇ ಅಂತಹದೆ ಮತ್ತೊಂದು ಘಟನೆ ಉಡುಪಿ ಜಿಲ್ಲೆಯ ಪೇಜಾವರ ಮಠದಲ್ಲಿ ನಡೆದಿದೆ. ಉಡುಪಿ ಪೇಜಾವರ ಮಠದ ಅಧಿನದಲ್ಲಿರುವ ನೀಲಾವರ ಗೋಶಾಲೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಅನಧಿಕೃತ ದೇಣಿಗೆ ಹಣ ಸಂಗ್ರಹಿಸುತ್ತಿದ್ದ ಗೋವರ್ಧನಗಿರಿ ಟ್ರಸ್ಟ್ನ ಸದಸ್ಯನೊಬ್ಬನ ವಂಚನೆ ಬಯಲಿಗೆ ಬಂದಿದೆ. ಈ ಹಿನ್ನೆಲೆ ತಕ್ಷಣ ಆರೋಪಿಯಾದ ಶಶಿಧರ್ ಭಟ್ ಎನ್ನುವವನ್ನು ಟ್ರಸ್ಟ್ನಿಂದ ವಜಾಗೊಳಿಸಲಾಗಿದೆ. ಉಡುಪಿ ಭಾರತೀಶ ಜ್ವವೆಲ್ಲರ್ಸನ ಮಾಲೀಕ...







