ಮಣಿಪಾಲದ ಲಾಡ್ಜ್ ನಲ್ಲಿ ಬಾಲಕಿಯ ಮೇಲೆ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ಎಸಗಿದ ಪ್ರಕರಣ ; ಆರೋಪಿ ಗ್ಲೆನ್ ಜೆಫ್ರಿ ಮಥಾಯಸ್ ಹಾಗೂ ಸುಹೇಲ್ ಗೆ 20 ವರ್ಷ ಕಠಿಣ ಶಿಕ್ಷೆ – ಕಹಳೆ ನ್ಯೂಸ್
ಉಡುಪಿ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಲಾಡ್ಜ್ ನಲ್ಲಿ ಗ್ಯಾಂಗ್ ರೇಪ್ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಉಡುಪಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 60 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಸಂತ್ರಸ್ತ ಬಾಲಕಿಯ ತಾಯಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರು ಗ್ಲೆನ್ ಜೆಫ್ರಿ ಮಥಾಯಸ್ ಹಾಗೂ ಸುಹೇಲ್ ಎಂ. ಎಂಬವರನ್ನು ಬಂಧಿಸಿದ್ದರು....




