ಅಕಾಲಿಕ ಮಳೆ: ಸಿಡಿಲು ಬಡಿದು ವರ್ಕ್ ಫ್ರಂ ಹೋಮ್ ಉದ್ಯೋಗಿ ಸಾವು – ಕಹಳೆ ನ್ಯೂಸ್
ಉಡುಪಿ : ಗುರುವಾರ ರಾತ್ರಿ ಕರಾವಳಿ ಭಾಗದಲ್ಲಿ ಸುರಿದ ಸಿಡಿಲು-ಮಿಂಚು ಸಹಿತ ಮಳೆಗೆ, ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಬಳಿ ನಡೆದಿದೆ. ಉಡುಪಿಯ ಬ್ರಹ್ಮಾವರ ತಾಲೂಕು ವಂಡಾರಿನ ಬೋರ್ಡಕಲ್ಲಿನ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಚೇತನ್ (24) ಮೃತಪಟ್ಟ ಯುವಕನಾಗಿದ್ದಾನೆ. ಮಳೆ ಬರುತ್ತಿದ್ದ ಸಂದರ್ಭದಲ್ಲಿ ಚೇತನ್ ಮನೆಯೊಳಗಡೆ ಲ್ಯಾಪ್ ಟಾಪ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಸಿಡಿಲು ಬಡಿದಾಗ ಗಂಭೀರವಾಗಿ ಅಸ್ವಸ್ಥಗೊಂಡ ಚೇತನ್ರನ್ನು ತತ್‌ಕ್ಷಣ ಬ್ರಹ್ಮಾವರದ...







