Saturday, July 25, 2026
ಸುದ್ದಿ

ಸಿಜೆಪಿ ಪ್ರತಿಭಟನೆಯ ಹಿಂದೆ ವಿದೇಶಿ ಶಕ್ತಿಗಳ ಸಂಚು : ನಂದನ್ ಮಲ್ಯ- ಕಹಳೆ ನ್ಯೂಸ್

CJP ಪ್ರತಿಭಟನೆಯ ಹಿಂದೆ ವಿದೇಶಿ ಶಕ್ತಿಗಳ ಸಂಚು: ಕಾಂಗ್ರೆಸ್ ಮತ್ತು ಎಡಪಂಥೀಯರ ಹಿತ್ತಲ ರಾಜಕೀಯವನ್ನು ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಕೇವಲ ವಿದ್ಯಾರ್ಥಿ ಹಿತರಕ್ಷಣೆಯ ನಾಟಕವಾಗಿದ್ದು, ಇದರ ಹಿಂದೆ ವಿದೇಶಿ ನಿಧಿ (Foreign Funding) ಪಡೆಯುವ ದೇಶವಿರೋಧಿ ಶಕ್ತಿಗಳು ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು ಬಲಿಪಶು ಮಾಡಲು ಹೊರಟಿರುವ ಬೃಹತ್ ರಾಜಕೀಯ ಚಕ್ರವ್ಯೂಹ ಅಡಗಿದೆ.
CJP ಎಂಬ ಅನಾಮಧೇಯ ಸಂಘಟನೆಯ ಮುಖವಾಡದ ಹಿಂದೆ ಕಾಂಗ್ರೆಸ್, SFI ಮತ್ತು AISF ನಂತಹ ಎಡಪಂಥೀಯ ಯುವ ಸಂಘಟನೆಗಳು ನಿಂತು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿವೆ. ನೇರವಾಗಿ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಎದುರಿಸಲಾಗದ ಕಾಂಗ್ರೆಸ್, ಇಂತಹ ಗಲಭೆಕೋರ ಪಡೆಗಳ ಬೆನ್ನಿಗೆ ನಿಂತು ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಜುಲೈ 20 ರಂದು ನಡೆದ ಸಂಸತ್ ಮುತ್ತಿಗೆಯ ಹೆಸರಿನಲ್ಲಿ ದೆಹಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿರುವುದು ಹಾಗೂ ಕನಿಷ್ಠ 118 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವುದು ಇವರ ಅಸಲಿ ಮುಖವಾಡವನ್ನು ಕಳಚಿಹಾಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರ್ಕಾರವು ದೇಶದ ಸುರಕ್ಷತೆಗಾಗಿ ವಿದೇಶಿ ಅನುದಾನ ನಿಯಂತ್ರಣ ಕಾಯ್ದೆಯನ್ನು (FCRA Rules) ಬಿಗಿಗೊಳಿಸುತ್ತಿರುವುದು ಕೆಲವು ದೇಶವಿರೋಧಿ ಸ್ವಯಂಸೇವಾ ಸಂಸ್ಥೆಗಳಿಗೆ (NGOs) ಮತ್ತು ವಿದೇಶಿ ಶಕ್ತಿಗಳಿಗೆ ನುಂಗಲಾರದ ತುತ್ತಾಗಿದೆ. ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಿ, ವಿದೇಶಿ ನಿಧಿಯ ಮೇಲಿನ ಕಟ್ಟುನಿಟ್ಟಿನ ತನಿಖೆ ಹಾಗೂ ಮುಂಬರುವ ಶಾಸನಸಭಾ ಪ್ರಕ್ರಿಯೆಗಳನ್ನು ತಡೆಯಲು (FCRA Amendment) ಈ ಪ್ರತಿಭಟನೆಯನ್ನು ಯೋಜಿತ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ರೈತರ ಹೋರಾಟದ ನೆಪದಲ್ಲಿ ಹಾಗೂ ಶಾಹಿನ್ ಬಾಗ್ ಪ್ರತಿಭಟನೆಯಲ್ಲಿ ಯಾವ ರೀತಿ ದೇಶವಿರೋಧಿ ‘ಟೂಲ್‌ಕಿಟ್’ ಪಡೆಗಳು ಸಕ್ರಿಯವಾಗಿದ್ದವೋ, ಅದೇ ಮಾದರಿಯಲ್ಲಿ ಈಗ ದೆಹಲಿಯಲ್ಲಿ ಕೃತಕ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಈ ಕೂಡಲೇ CJP ಮತ್ತು ಅದಕ್ಕೆ ಬೆಂಬಲ ನೀಡುತ್ತಿರುವ ಸಂಸ್ಥೆಗಳ ವಿದೇಶಿ ಆರ್ಥಿಕ ಮೂಲದ (Foreign Funding) ಕುರಿತು ಕಟ್ಟುನಿಟ್ಟಿನ ತನಿಖೆಯಾಗಬೇಕು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸ್ಪಷ್ಟಪಡಿಸಿರುವಂತೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶೈಕ್ಷಣಿಕ ವಿಷಯಗಳನ್ನು ಮತ್ತು ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಸಮಯದಲ್ಲಿ ಕೇವಲ ಅಡಚಣೆ ಉಂಟುಮಾಡುವುದು ಮತ್ತು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವುದೇ ಇವರ ಏಕೈಕ ಉದ್ದೇಶವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ವಿಶ್ವಗುರುವಾಗಿ ಬೆಳೆಯುತ್ತಿರುವುದನ್ನು ಸಹಿಸದ ಕೆಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ಶಕ್ತಿಗಳು ಈ ಸಣ್ಣತನದ ಕೃತ್ಯದ ಹಿಂದಿವೆ. ಭಾರತದ ಕೋಟ್ಯಂತರ ಯುವಜನತೆ ಮತ್ತು ವಿದ್ಯಾರ್ಥಿಗಳು ಮೋದಿಜೀಯವರ ಪಾರದರ್ಶಕ ಆಡಳಿತ ಮತ್ತು ದೇಶಪ್ರೇಮಿ ನೀತಿಗಳ ಪರವಾಗಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಮತ್ತು ಕಾನೂನು ಕೈಗೆತ್ತಿಕೊಂಡ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ CJP ಯ ವಿದೇಶಿ ಹಣಕಾಸು ಮೂಲಗಳ ಬಗ್ಗೆ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಯುವ ಮೋರ್ಚಾ ಒತ್ತಾಯಿಸುತ್ತದೆ.

ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ನರೇಂದ್ರ ಮೋದಿಜೀಯವರ ವಿಕಸಿತ ಭಾರತದ ಸಂಕಲ್ಪಕ್ಕೆ ಧಕ್ಕೆ ತರಲು ಯತ್ನಿಸುವ ಯಾವುದೇ ಶಕ್ತಿಯ ವಿರುದ್ಧ ಯುವ ಮೋರ್ಚಾ ಬೀದಿಗಿಳಿದು ಹೋರಾಡಲಿದೆ.