ಉಡುಪಿ ನಗರ ಮತ್ತು ಜಿಲ್ಲೆಯಲ್ಲಿ ನರ್ಮ್ ಬಸ್ ಪ್ರಾರಂಭಿಸುವಂತೆ ಕಾಂಗ್ರೆಸ್ ಒತ್ತಾಯ-ಕಹಳೆ ನ್ಯೂಸ್
ಉಡುಪಿ : ಉಡುಪಿ ನಗರ ಮತ್ತು ಜಿಲ್ಲೆಯಲ್ಲಿ ಪ್ರಮೋದ್ ಮಧ್ವರಾಜ್‍ರವರು ಸಚಿವರಾಗಿದ್ದಾಗ 51 ಮಾರ್ಗಗಳಲ್ಲಿ ನರ್ಮ್ ಬಸ್‍ಗಳನ್ನು ಸತತ ಪರಿಶ್ರಮದಿಂದ ಖಾಸಗಿ ಬಸ್ ಮಾಲಿಕರ ಲಾಬಿಗೆ ಮಣಿಯದೆ ಪ್ರಾರಂಭಿಸಿದರು. ಉದ್ದೇಶ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ನಿತ್ಯ ಪ್ರಯಾಣಿಕರಿಗೆ ಮಿತ ದರದಲ್ಲಿ ಪ್ರಯಾಣಿಸಲು ಅನುಕೂಲವಾಗಲು ಅವಶ್ಯಕತೆ ಇದ್ದ ಮಾರ್ಗಗಳಲ್ಲಿ ಸರಕಾರಿ ಬಸ್‍ಗಳನ್ನು ಪ್ರಾರಂಭಿಸಿದರು. ಕಳೆದ ವರ್ಷ ಕೋವಿಡ್ -19 ನೆಪದಿಂದ ತನ್ನ ಸಂಚಾರವನ್ನು ಕೆಲವು ತಿಂಗಳು ಸಂಪೂರ್ಣ...







