ಮಂಗಳೂರಿನಿಂದ ಕಾಸರಗೋಡಿಗೆ ಹೊರಟವರಿಗೆ ತಡೆ: ತಲಪಾಡಿ ಚೆಕ್‌ಪೋಸ್ಟ್ ಬಳಿ ನೂರಾರು ಜನ-ಕಹಳೆ ನ್ಯೂಸ್
ಮಂಗಳೂರು: ಉದ್ಯೋಗ ನಿಮಿತ್ತ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ನಿತ್ಯವೂ ಸಂಚರಿಸುತ್ತಿದ್ದವರಿಗೆ ತಲಪಾಡಿ ಚೆಕ್ ಪೋಸ್ಟ್ ಬಳಿ ಕಾಸರಗೋಡು ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ ತಡೆಹಾಕಿದೆ. ಉದ್ಯೋಗ, ಶಿಕ್ಷಣದ ಕಾರಣಕ್ಕೆ ನಿತ್ಯವೂ ಎರಡೂ ಜಿಲ್ಲೆಗಳ ನಡುವೆ ಸಂಚರಿಸುವವರಿಗೆ ಉಭಯ ಜಿಲ್ಲಾಡಳಿತಗಳು ಪಾಸ್ ನೀಡಿದ್ದವು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಕಾಸರಗೋಡು ಜಿಲ್ಲಾಡಳಿತ ಮಂಗಳವಾರದಿಂದ ಪ್ರಯಾಣ ನಿರ್ಬಂಧಿಸಿದೆ. ತಿಂಗಳಲ್ಲಿ ಒಮ್ಮೆ ಮಾತ್ರ...






