Sunday, April 26, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಸುದ್ದಿ

ವಾಮಂಜೂರು ನೀರುಮಾರ್ಗದಲ್ಲಿ ಹಲ್ಲೆ ಪ್ರಕರಣ: ನಿರಪರಾಧಿಗಳನ್ನು ಪೊಲೀಸ್ ಸ್ಟೇಷನ್ ನಿಂದ ಬಿಡಿಸಿ ಕರೆತಂದ ಶಾಸಕ ಭರತ್ ಶೆಟ್ಟಿ –ಕಹಳೆ ನ್ಯೂಸ್

ಮಂಗಳೂರು: ಇತ್ತೀಚೆಗೆ ವಾಮಂಜೂರು ಠಾಣಾ ವ್ಯಾಪ್ತಿಯ ನೀರುಮಾರ್ಗದಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ಕೇಸು ದಾಖಲಿಸಿಕೊಂಡ ಪೊಲೀಸರು ಅಪರಾಧಿಗಳನ್ನು ಹಾಗೂ ಹಲವು ನಿರಪರಾಧಿಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದರು. ಈ ಬಗ್ಗೆ ಮಾಹಿತಿಯನ್ನು ಪಡೆದಕೊಂಡ ಮಂಗಳೂರು ಉತ್ತರದ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ “ಅಪರಾಧಿಗಳ ವಿಚಾರಣೆಗೆ ಯಾರು ಅಡ್ಡಿಪಡಿಸುವುದಿಲ್ಲ ಆದರೆ ವಿನಾಕಾರಣ ನಿರಪರಾಧಿಗಳಿಗೆ ಶಿಕ್ಷೆಯಾಗುವುದು ಸರಿಯಲ್ಲ” ಎಂದರಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗದ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕೆಟ್ಟ ಕೆಲಸ ಮಾಡುತ್ತಿರುವ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ ಹಸಂತ್ತಡ್ಕ – ಕಹಳೆ ನ್ಯೂಸ್

ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ವೇದವಾಕ್ಯದಡಿ ವಿಶ್ವದಾದ್ಯಂತ ಹಿಂದೂಗಳ ಸಂಘಟನಾ ಜಾಗೃತಿ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ. ಮಂಗಳೂರು ವಿಭಾಗದಲ್ಲಿ ಹಿಂದೂಗಳ ಮುಖವಾಣಿಯಾಗಿ ಕಟ್ಟ ಕಡೆಯ ಹಿಂದೂವಿನ ರಕ್ಷಣೆ, ಸೇವೆಯ ಕಾರ್ಯವನ್ನು ಅನೇಕ ವರ್ಷಗಳಿಂದ ಮಾಡ್ತಾ ಬಂದಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ ಹಸಂತ್ತಡ್ಕ ತಿಳಿಸಿದ್ದಾರೆ. ಕೊರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸಂಘಟನೆ ಸೇವಾಕಾರ್ಯದಲ್ಲಿ ತೊಡಗಿಕೊಂಡಿತ್ತು. ಮಂಗಳೂರು ಭಾಗದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ, ಲವ್...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗೇರಡ್ಕದಲ್ಲಿ ಯಶಸ್ವಿಯಾಗಿ ನೇರವೇರಿದ ಸ್ವಚ್ಛತಾ ಕಾರ್ಯ – ಕಹಳೆ ನ್ಯೂಸ್

ಮೊಗ್ರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗೇರಡ್ಕ'ದಲ್ಲಿ ಶ್ರಮದಾನ ಮೂಲಕ ಆವರಣ, ಅಂಗಣ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಮಣ್ಣ ಗೌಡ ಪರಕ್ಕಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ,ಶಾಲಾಭಿವೃದ್ದಿ ಸಮಿತಿ ಸದಸ್ಯರು, ಊರ ಗ್ರಾಮಸ್ಥರು, ಹಳೇವಿದ್ಯಾರ್ಥಿ ಗಳು, ಹಾಗೂ ಶಾಲಾ ಮಕ್ಕಳು ಭಾಗವಹಿಸಿದರು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಜಯಶ್ರೀಯವರ ಮಗನ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿದ ರೈ ಎಸ್ಟೇಟ್ ಮಾಲಕರಾದ ಅಶೋಕ್ ರೈ- ಕಹಳೆ ನ್ಯೂಸ್

ಪುತ್ತೂರು : ಕಸಬ ಗ್ರಾಮದ ವಿಶ್ವಕರ್ಮ ನಗರ ಬಿರಮಲೆ ನಿವಾಸಿ ಜಯಶ್ರೀ ಯವರ ಮಗ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಶಾಲೆಯ ಶುಲ್ಕವನ್ನು ಪಾವತಿಸಲು ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರೀಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಸಹಾಯದ ಚೆಕ್ಕನ್ನು ಹಸ್ತಾಂತರಿಸಿದರು. Video: ವಿಹಿಂಪ ಬಜರಂಗದಳ ಪುತ್ತೂರು ಹಾಗೂ ಕ್ಯಾಂಪ್ಕೂ ಇನ್ ಸೇವಾ ಸಹಭಾಗಿತ್ವದಲ್ಲಿ ಕೇಸರಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ತ್ರಿಶೂಲ್ ಫ್ರೆಂಡ್ಸ್ ರಿ.ನ 4ನೇ ವರ್ಷದ ಸಂಭ್ರಮದ ಅಂಗವಾಗಿ ನಾಳೆ ತಂಡದ ಸದಸ್ಯರಿಂದ ರಕ್ತದಾನ – ಕಹಳೆ ನ್ಯೂಸ್

ಪುತ್ತೂರು : ತ್ರಿಶೂಲ್ ಫ್ರೆಂಡ್ಸ್ ರಿ. ಯಶಸ್ವಿಯಾಗಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ತ್ರಿಶೂಲ್ ಫ್ರೆಂಡ್ಸ್ ರಿ. 4ನೇ ವರ್ಷದ ಸಂಭ್ರಮಕ್ಕೆ, ನಾಳೆ ರೋಟರಿ ಬ್ಲಡ್ ಬ್ಯಾಂಕ್‍ನಲ್ಲಿ, ತ್ರಿಶೂಲ್ ಫ್ರೆಂಡ್ಸ್ ರಿ. ತಂಡದ ಸದಸ್ಯರಿಂದ ರಕ್ತದಾನ ನಡೆಯಲಿದೆ. ಯುವ ತರುಣರ ತಂಡವಾದ ತ್ರಿಶೂಲ್ ಫ್ರೆಂಡ್ಸ್(ರಿ) ಪುತ್ತೂರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಯಾವುದೇ...
ದಕ್ಷಿಣ ಕನ್ನಡಸುದ್ದಿ

ಮಂಗಳೂರಿನಲ್ಲಿ ಜನರಲ್ ಬಿಪಿನ್ ರಾವತ್ ಸಾವಿಗೆ ಸಂಭ್ರಮಾಚರಿಸಿದ ಪುಂಡರು : 3 ಫೇಸ್‍ಬುಕ್ ಖಾತೆಗಳ ವಿರುದ್ಧ ಪ್ರಕರಣ ದಾಖಲು – ಕಹಳೆ ನ್ಯೂಸ್

ಮಂಗಳೂರು: ರಕ್ಷಣಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ಮಾಡಿದ ಆರೋಪದಲ್ಲಿ ಮೂರು ಫೇಸ್‍ಬುಕ್ ಖಾತೆಗಳ ವಿರುದ್ಧ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ. 'ವಸಂತಕುಮಾರ್ ಟಿ.ಕೆ, ಶ್ರೀನಿವಾಸ ಕಾರ್ಕಳ ಹಾಗೂ ಇನ್ನೊಂದು ಅಪರಿಚಿತ ಫೇಸ್‍ಬುಕ್ ಖಾತೆಯಲ್ಲಿ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಸುಶಾಂತ್ ಪೂಜಾರಿ ದೂರಿನ್ವಯ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುತ್ತಿದ್ದು,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಿಎನ್‍ಜಿ ಬಸ್ ನ ಓಡಾಟ- ಕಹಳೆ ನ್ಯೂಸ್

ಬಂಟ್ವಾಳ: ಪೆಟ್ರೋಲ್-ಡೀಸೆಲ್‍ಗೆ ಪರ್ಯಾಯ ಇಂಧನವಾಗಿ ವಾಹನಗಳಿಗೆ ಸಿಎನ್‍ಜಿ (ಕಂಪ್ರಸ್‍ಡ್ ನ್ಯಾಚುರಲ್ ಗ್ಯಾಸ್) ಬಳಕೆ ಮಾಡಲಾಗುತ್ತಿದ್ದು, ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಿಎನ್‍ಜಿ ಇಂಧನ ಬಳಕೆಯ ಬಸ್ಸೊಂದು ಶನಿವಾರ ರಸ್ತೆಗಿಳಿದಿದೆ. ಉಪ್ಪಿನಂಗಡಿ- ಮಂಗಳೂರು ಮಾರ್ಗದಲ್ಲಿ ಈ ಹೊಸ ಬಸ್ ಓಡಾಟ ಆರಂಭಿಸಿದೆ. ಈ ಬಸ್ಸನ್ನು ಟಾಟಾ ಮೋಟಾರ್ಸ್ ಕಂಪೆನಿ ತಯಾರಿಸಿದ್ದು, ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಿಎನ್‍ಜಿ ಆಧಾರಿತ ಮೊಟ್ಟಮೊದಲ ಬಸ್ ಎಂದು ಖಾಸಗಿ ಬಸ್ ಮಾಲಕರ ಸಂಘದವರು ತಿಳಿಸಿದ್ದಾರೆ. ಕಂಪೆನಿಯವರ ಮಾಹಿತಿ ಪ್ರಕಾರ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ‘ನಯನ ಫೋಟೊಗ್ರಾಫಿ ಕ್ಲಬ್’ ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಫೋಟೋಗ್ರಾಫಿ ಅನ್ನುವುದು ಸುಲಭ ಎಂದನಿಸುವುದು ಸಹಜ. ಫೋಟೋಗ್ರಾಫಿಯಿಂದ ಕಲಿಯುವಂತದ್ದು ತಾಳ್ಮೆ ಮತ್ತು ಸಮಯ ಪ್ರಜ್ಞೆ. ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡುವುದಕ್ಕಿಂತ ಮಾರ್ಗದರ್ಶನ ಅವಶ್ಯಕವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಫೋಟೊಗ್ರಾಫಿಯಿದೆ. ವಿದ್ಯಾರ್ಥಿಗಳು ಕಲಾತ್ಮಕ, ಕ್ರಿಯಾತ್ಮಕ ದೃಷ್ಟಿಯಿಂದ ನೋಡಿದಾಗ ಮಾತ್ರ ಅದನ್ನು ಕಾಣಲು ಸಾಧ್ಯವಾಗುತ್ತದೆ. ಫೋಟೋಗ್ರಾಪಿ ಪ್ರಕೃತಿಯನ್ನು ನೋಡುವ ದೃಷ್ಟಿಯನ್ನು ಬದಲಾಯಿಸುತ್ತದೆ. ಕಲಿಯುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಮೈಸೂರಿನ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಗ್ರಾಹಕ ಬಾಬು ಜಿ. ಎಸ್. ಹೇಳಿದರು. ವಿವೇಕಾನಂದ ಮಹಾವಿದ್ಯಾಲಯದಲ್ಲಿ, ಪದವಿ...
1 666 667 668 669 670 725
Page 668 of 725