ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನ್ವಿತಾಗೆ ಚೈತನ್ಯ ಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ- ಕಹಳೆ ನ್ಯೂಸ್
ಪುತ್ತೂರು: ಮಂಗಳೂರು ಕಥಾ ಬಿಂದು ಆಯೋಜಿಸಿರುವ ಶಿಶಿರ ಕಾವ್ಯ ಸಂಭ್ರಮದಲ್ಲಿ ಸ್ಯಾಕ್ಸೋಫೋನ್ ನಲ್ಲಿ ಬಹುಮುಖ ಪ್ರತಿಭೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಅನ್ವಿತಾ ಎ ವಿ ಇವರು ವರ್ಷದ ಚೈತನ್ಯಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಟ್ಲದ ಅರುಣ್ ಮತ್ತು ವಿಜಯಲಕ್ಷ್ಮೀ ದಂಪತಿಗಳ ಪುತ್ರಿಯಾದ ಅನ್ವಿತಾ ಬಾಲ್ಯದಿಂದಲೇ ಸಾಧನೆ ಮಾಡುತ್ತಾ ನೂರಾರು ಸ್ಯಾಕ್ಸೋಫೋನ್ ಕಚೇರಿಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮಂಗಳೂರಿನ ವುಡ್‍ಲ್ಯಾಂಡ್ಸ್ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ...







