ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ತಾಲೂಕು ಮಟ್ಟದ ಒಕ್ಕೂಟಗಳ ಅಧ್ಯಕ್ಷರುಗಳ ಸಭೆ– ಕಹಳೆ ನ್ಯೂಸ್
ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ತಾಲೂಕು ಮಟ್ಟದ ಒಕ್ಕೂಟಗಳ ಅಧ್ಯಕ್ಷರುಗಳ ಸಭೆಯು ವಿಟ್ಲ ಶ್ರೀ ಗಜಾನನ ಸಭಾ ಭವನದಲ್ಲಿ ನಡೆಯಿತು. ಉಡುಪಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇ ಗೌಡರವರು ಕಾರ್ಯಕ್ರವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರದ ಹಿನ್ನೆಲೆ, ಸೇವೆ ಮತ್ತು ಪರಿವರ್ತನೆಯ ಮಹತ್ವ, ಒಕ್ಕೂಟದ ಅರ್ಥ, ಅಧ್ಯಕ್ಷರ ಹೊಣೆಗಾರಿಕೆ, ಪದಾಧಿಕಾರಿಗಳ ಜವಾಬ್ದಾರಿಗಳು, ಒಕ್ಕೂಟ ಸಭೆಯ ಸಮರ್ಪಕ ನಿರ್ವಹಣೆ, ಸಂಘ-ಯೋಜನೆ-ಬ್ಯಾಂಕಿಗೆ...







