ಬಲ್ನಾಡು ಮನೆಯೊಳಗೆ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ-ಕಹಳೆ ನ್ಯೂಸ್
ಪುತ್ತೂರು: ವೃದ್ಧರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿರುವ ವಿಚಾರ ಪಕ್ಕದ ಮನೆಯವರ ಮೂಲಕ ಬೆಳಕಿಗೆ ಬಂದ ಘಟನೆ ಪುತ್ತೂರಿನ ಬಲ್ನಾಡಿನ ದೇರಾಜೆ ಅಟ್ಕಾರು ಎಂಬಲ್ಲಿ ನಡೆದಿದೆ. ದೇರಾಜೆ ಅಟ್ನಾರು ನಿವಾಸಿ ರಮೇಶ್ ರಾವ್ (70) ಮೃತಪಟ್ಟವರು ಎಂದು ತಿಳಿದುಬಂದಿದೆ. ರಮೇಶ್ ರಾವ್ ಹಾಗೂ ಅವರ ಪತ್ನಿ ಸ್ವಲ್ಪ ಮಾನಸಿಕ ಅಸ್ವಸ್ಥೆಯಾಗಿರುವ ವಸಂತಿ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಮಕ್ಕಳು ಇಲ್ಲದೇ ಇರುವುದರಿಂದ ಅವರಿಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಹೆಚ್ಚಾಗಿ ಯಾರಲ್ಲೂ ಒಡನಾಟವಿಲ್ಲದೇ ಇರುವುದರಿಂದ...







