ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೂತನ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜುರಾದ ಅನುದಾನದ ಮಂಜುರಾತಿ ಪತ್ರ ಹಸ್ತಾಂತರ- ಕಹಳೆ ನ್ಯೂಸ್
ಬಂಟ್ವಾಳ : ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕೊಳಲ ಬಾಕಿಮಾರು ಎಂಬಲ್ಲಿ ನೂತನ ಅಂಚೆ ಕಛೇರಿಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂಪಾಯಿ 50,000/- ಮಂಜುರಾಗಿದ್ದು. ಈ ಮಂಜುರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ರವರು ಕಟ್ಟಡ ಸಮಿತಿ ಅಧ್ಯಕ್ಷರಾದ ಬೂಬಸಪಲ್ಯ ಮುಂಡಬೈಲು ರವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮೂಡುಪಡುಕೋಡಿ ಶಾಖಾ ಅಂಚೆ ಪಾಲಕರಾದ ಮಹಮ್ಮದ್ ಕಲಿಲ್, ಕಟ್ಟಡ ಸಮಿತಿ...







