Friday, June 12, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಮಂಗಳೂರುಸುದ್ದಿ

ಅ. 18ರಂದು ‘ಸೇವ್ ಅವರ್ ಸೋಲ್’ ಕಿರುಚಿತ್ರ ಬಿಡುಗಡೆ- ಕಹಳೆ ನ್ಯೂಸ್

ಮಂಗಳೂರು: ಅಪಘಾತ ಮತ್ತು ಅತ್ಯಾಚಾರದಂತಹ ಘಟನೆಗಳು ನಡೆದಾಗ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್ ಫೋನ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎಂದು ಮಹತ್ವದ ಸಂದೇಶ ಸಾರುವ ಕಿರುಚಿತ್ರ ‘ಸೇವ್ ಅವರ್ ಸೋಲ್’ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿದೆ. ಎ.ಯು. ಕ್ರಿಯೇಶನ್ಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಕಿರುಚಿತ್ರದ ಬಿಡುಗಡೆ ಎ.ಯು. ಕ್ರಿಯೇಶನ್ಸ್ ಯೂ ಯೂ ಟ್ಯೂಬ್‌ನಲ್ಲಿ ಅಕ್ಟೋಬರ್...
ಕ್ರೀಡೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆ ತೆಂಕಿಲ ಕ್ಯಾಂಪಸ್ ನಲ್ಲಿ 4 ದಿನಗಳ ಕಾಲ ನಡೆಯಲಿದೆ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಟೂರ್ನಿ – 700ಕ್ಕೂ ಮಿಕ್ಕಿ ಕ್ರೀಡಾಳುಗಳು ಭಾಗಿ – ಅ. 16ಕ್ಕೆ ಜಾಥ; ಅ. 18,19ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾಭಾರತಿ ಶಿಕ್ಷಣ ಸಂಸ್ಥಾನದೊಂದಿಗೆ ಸಂಯೋಜನೆಗೊಂಡಿರುವ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಟೂರ್ನಿ ತೆಂಕಿಲ ವಿವೇಕಾನಂದ ಅಂಗ್ಲ ಮಾದ್ಯಮ ಶಾಲೆಯ ಕ್ಯಾಂಪಸ್ ನಲ್ಲಿ ಅ.16 ರಿಂದ ಅ.19 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ವಿವಿಧ ವಯೋಮಾನ ಅನುಗುಣವಾಗಿ ಬಾಲ, ಕಿಶೋರ, ತರುಣ ವಿಭಾಗದಡಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಸ್ಪರ್ಧಿಸಲಿದ್ದಾರೆ. ವಿವಿಧ ರಾಜ್ಯಗಳಿಂದ ರಾಷ್ಟ್ರ ಮಟ್ಟಕೆ ಆಯ್ಕೆಗೊಂಡಿರುವ ಸುಮಾರು 720 ಸ್ಪರ್ಧಾಳುಗಳು, 100 ಮಂದಿ ಅಧಿಕಾರಿ ವರ್ಗ ಭಾಗವಹಿಸಲಿದ್ದಾರೆ ಎಂದು...
ದಕ್ಷಿಣ ಕನ್ನಡಪುತ್ತೂರುಸುದ್ದಿ

Golden Girls of GL-ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ವಿನೂತನ ‘ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್’ ಸ್ಪರ್ಧೆ : 1000 ಸ್ಪರ್ಧಿಗಳಲ್ಲಿ ಫೈನಲ್ ಪ್ರವೇಶಿಸಿದ 20 ರೂಪದರ್ಶಿಗಳಿಂದ ಚಿನ್ನದ ವಿಶೇಷ ಕಲೆಕ್ಷನ್ ನೊಂದಿಗೆ Ramp Walk : ರೋಶನಿ ಗೌಡ ಪ್ರಥಮ – ಕಹಳೆ ನ್ಯೂಸ್

ಪುತ್ತೂರು : ಜಿಲ್ಲೆಯಾದ್ಯಂತ ಮನೆಮಾತಾಗಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವಿನೂತನ ಸ್ಪರ್ಧೆ ನಡೆಸಿದ್ದು, ‘ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್’ ಸ್ಪರ್ಧೆಯಲ್ಲಿ ರೋಶನಿ ಗೌಡ ಪ್ರಥಮ ಸ್ಥಾನ ಪಡೆದಿದ್ದಾರೆ. ಜಿ.ಎಲ್ ವನ್ ಮಾಲ್ ನಲ್ಲಿ ಅ.13ರಂದು ನಡೆದ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಸೀರೆ ಉಟ್ಟುಕೊಂಡು ಪ್ರಾಚಿ, ಪಾರ್ಥ, ಗ್ಲೋ ಜ್ಯೂವೆಲ್ಲರಿ ಧರಿಸಿ 20 ರೂಪದರ್ಶಿಗಳು ರ್ಯಾಂಪ್ ವಾಕ್ ನಡೆಸಿದರು. ಸುಮಾರು 1000 ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ 20 ರೂಪದರ್ಶಿಗಳು ಫೈನಲ್ ಪ್ರವೇಶ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ರಾಧಾಸ್ ಉತ್ಸವ : ಆಫರ್ ಗಳ ಬಿಗ್‍ಬಾಸ್ ಕೊಡುಗೆಗಳ ಸುರಿಮಳೆಯ ಮೊದಲ ಫಲಿತಾಂಶ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಬಟ್ಟೆ ಮಳಿಗೆ ರಾಧಾಸ್ ನಲ್ಲಿ ಅ.07ರಿಂದ ಡಿ.31ರವರೆಗೆ ಶಾಪಿಂಗ್ ಮಾಡಿ ಮತ್ತು ಬಹುಮಾನ ಗೆಲ್ಲಿರಿ ಎಂಬ ಪರಿಕಲ್ಪನೆಯೊಂದಿಗೆ ರಾಧಾಸ್ ಉತ್ಸವ ನಡೆಯುತ್ತಿದೆ. ಪ್ರತಿ 3999 ರೂ./- ಖರೀದಿಗೆ ಒಂದು ಕೂಪನ್ ಪಡೆದು, ಪ್ರತಿವಾರ ನಡೆಯುವ ಲಕ್ಕಿ ಕೂಪನ್ ನಲ್ಲಿ ಬಹುಮಾನಗಳನ್ನು ಗೆಲ್ಲಿರಿ ಹಾಗೂ ಬಟ್ಟೆಗಳ ಖರೀದಿಗೆ 15% ಡಿಸ್ಕೌಂಟ್ ಪಡೆಯಬಹುದು   ಮೊದಲ ವಾರದ ಮೊದಲ ಫಲಿತಾಂಶ ಇಂದು ನಡೆದಿದ್ದು, ಮೊದಲ ಬಹುಮಾನವನ್ನು ಅಶ್ವಿನಿಯವರು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಬಿಸಿರೋಡಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ಕಾಮಾಜೆ ನಿವಾಸಿ ಕರುಣಾಕರ (35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಮರದ ಕೆಲಸ ಮಾಡುತ್ತಿದ್ದ ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ಕರುಣಾಕರ ಅವರೇ ಮನೆಯ ಆಧಾರಸ್ತಂಭವಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಇವರಿಗೆ ಮದುವೆಯಾಗಿದ್ದು, ಒಂದು ವರ್ಷದ ಹೆಣ್ಣುಮಗುವಿದೆ. ಸುಮಾರು 11 ಗಂಟೆಯ ವೇಳೆ ಬಿಜಾಪುರದಿಂದ ಮಂಗಳೂರಿಗೆ ಆಗಮಿಸುವ ರೈಲು ಡಿಕ್ಕಿಯಾಗಿದೆ.ಬಿಸಿರೋಡಿನ ರೈಲು ಸ್ಟೇಷನ್ ನ ಸಮೀಪದಲ್ಲಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಬೇಟಿ ನೀಡಿದ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾಶಿವರಾಜ್ ಕುಮಾರ್ – ಕಹಳೆ ನ್ಯೂಸ್

ಬಂಟ್ವಾಳ: ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾಶಿವರಾಜ್ ಕುಮಾರ್ ಅವರು ಇಂದು ಬೆಳಿಗ್ಗೆ ಬಿಸಿರೋಡಿನ ಕೈಕಂಬ ಸಮೀಪದ ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಬೇಟಿ ನೀಡಿದ್ದಾರೆ. Geetha Pictures  ಬ್ಯಾನರ್ ನಡಿಯಲ್ಲಿ ಗೀತಾಶಿವರಾಜ್ ಕುಮಾರ್ ಅವರ ನಿರ್ಮಾಣದ ಖ್ಯಾತ ನಟ ಶಿವರಾಜ್ ಕುಮಾರ್ ಅಭಿನಯದ ಹೊಸ ಚಲನಚಿತ್ರ "ಬೈರತಿ ರಣಗಲ್ " ನ.15 ರಂದು ಕರ್ನಾಟಕ ರಾಜ್ಯದ್ಯಾಂತ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಯಶಸ್ವಿಯಾಗಬೇಕು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶಾಲಾ ಬಸ್ ಚಾಲಕನಿಗೆ ಮೂರ್ಚೆ ರೋಗ ಉಂಟಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಸ್ : ಪ್ರಾಣಾಪಾಯದಿಂದ ಪಾರಾದ ಚಾಲಕ ಸಹಿತ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಬಂಟ್ವಾಳ: ಇಲ್ಲಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ಚಾಲಕನಿಗೆ ಮೂರ್ಚೆ ರೋಗ ( ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಬಡಕಬೈಲು ಸೈಂಟ್ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬವರಿಗೆ ಮೂರ್ಚೆ ರೋಗ ಬಾಧಿಸಿದ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ತೆರಳಿ ವಿದ್ಯುತ್...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು : ಮಹಿಳೆ ಮೃತ್ಯು – ಚಾಲಕನ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಬಂಟ್ವಾಳ: ಬಿಸಿರೋಡು- ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳೆತ್ತರದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು,ಚಾಲಕ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಕೊಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆಯಾಗಿದ್ದಾರೆ. ಚಾಲಕ ರೂಪೇಶ್ (40) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೂಪೇಶ್ ಅವರ...
1 292 293 294 295 296 739
Page 294 of 739