Sunday, June 14, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಾರ್ಚ್ 9 ರಿಂದ ಮಾರ್ಚ್ 16 ರವರೆಗೆ ನಡೆಯಲಿರುವ ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪುರ್ವಭಾವಿ ಸಭೆ-ಕಹಳೆ ನ್ಯೂಸ್

ಮಂಗಳೂರು: ಮಾರ್ಚ್ 9 ರಿಂದ ಮಾರ್ಚ್ 16 ರವರೆಗೆ ನಡೆಯಲಿರುವ ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬ್ರಹ್ಮಕಲಶೋತ್ಸವ ಸಮಿತಿ ಜೀರ್ಣೋದ್ದಾರ ಸಮಿತಿ ವ್ಯವಸ್ಥಾಪನ ಸಮಿತಿಯ ಪುರ್ವಭಾವಿ ಸಭೆ ಶುಕ್ರವಾರ ಕ್ಷೇತ್ರದ ಸಭಾಂಗಣದಲ್ಲಿ ನೆರವೇರಿತು. ಸಭೆಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಕುಮಾರಿ ಪ್ರಣತಿ ರಾವ್ ಅವರು ಹಾಡಿರುವ ಆದಿನಾಥ ಸನ್ನಿಧಿ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಬಾಲಕಿಯನ್ನು ಸನ್ಮಾನಿಸಿದರು.ಮುಂಬರುವ ಬ್ರಹ್ಮಕಲಶೋತ್ಸವ ಸಹಿತ ಧಾರ್ಮಿಕ ಕಾರ್ಯಕ್ರಮಗಳನ್ನು ಒಟ್ಟಾಗಿ ಸೇರಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸಂಸದರ ನೇತೃತ್ವದಲ್ಲಿ ಅಧಿಕಾರಿಗಳು, ನೆಲ್ಲಿದಡಿಗುತ್ತು ಪ್ರಮುಖರ ಸಭೆ-ಕಹಳೆ ನ್ಯೂಸ್

ಮಂಗಳೂರು: ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ಸುಮಾರು 800 ವರ್ಷಗಳ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ (ಸದ್ಯ ಎಸ್‌ಇಝಡ್‌ ಒಳಗೆ ಇದೆ) ದೈವಾರಾಧನೆಗೆ ಸಂಬಂಧಿಸಿ ಎಸ್‌ಇಝಡ್‌ ವಿವಾದ ಸೃಷ್ಟಿಸಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ಕ್ಯಾ| ಬ್ರಿಜೇಶ್‌ ಚೌಟರ ಅಧ್ಯಕ್ಷತೆಯಲ್ಲಿ ಎಸ್‌ಇಝಡ್‌ ಅಧಿಕಾರಿಗಳು ಮತ್ತು ನೆಲ್ಲಿದಡಿಗುತ್ತಿಗೆ ಸಂಬಂಧಪಟ್ಟವರ ಸಭೆ ನಡೆಯಿತು. ಎರಡೂ ಕಡೆಯವರ ಅಹವಾಲು ಆಲಿಸಿದ ಸಂಸದರು, ಸೋಮವಾರ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್‌, ನೆಲ್ಲಿದಡಿಗುತ್ತಿನ ಪ್ರಮುಖರು ಮತ್ತು...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಾಪತ್ತೆಯಾಗಿ 4 ದಿನ ಕಳೆದರೂ ವಿದ್ಯಾರ್ಥಿಯ ಪತ್ತೆ ಇಲ್ಲ-ಕಹಳೆ ನ್ಯೂಸ್

ಬಂಟ್ವಾಳ: ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್‌ನ ಕುರಿತು ಯಾವುದೇ ಸುಳಿವು ಸಿಗದೆ ಪ್ರಕರಣ ಇನ್ನಷ್ಟು ನಿಗೂಢತೆಯನ್ನು ಸೃಷ್ಟಿಸಿದ್ದು, ಪೊಲೀಸರು ಮೂರು ತಂಡಗಳಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೂ ಶುಕ್ರವಾರ ರಾತ್ರಿವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಪ್ರಕರಣವನ್ನು ಶೀಘ್ರ ಬೇಧಿಸುವ ನಿಟ್ಟಿನಲ್ಲಿ ಆಗ್ರಹಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರೇ ಕಾರ್ಯಾಚರಣೆಗಿಳಿದಿದ್ದು, ಆದರೂ ಯಾವುದೇ ಸುಳಿವು...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ನರಿಕೊಂಬು ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಮಕ್ಕಳಿಗೆ ಎಳವೆಯಲ್ಲಿ ವಿಜ್ಞಾನದ ಬೆಳವಣಿಗೆ ತಂತ್ರಜ್ಞಾನದ ಮಾಹಿತಿ ದೊರೆತಾಗ ಯಾವುದೇ ವಿಚಾರಗಳ ಸತ್ಯತೆಯನ್ನು ತಿಳಿಸಿಕೊಡುತ್ತದೆ.ಇದರಿಂದ ಮೂಡನಂಬಿಕೆಗಳು ನಾಶವಾಗುತ್ತವೆ ಮತ್ತು ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತಾರೆ , ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್ ಹೇಳಿದರು. ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಅಭಿವೃದ್ಧಿಯು ದೈವಾರಾಧನೆಗೆ, ಸಂಸ್ಕೃತಿಗೆ ಪೂರಕವಾಗಿರಬೇಕು :-ಶಾಸಕ ಕಾಮತ್ -ಕಹಳೆ ನ್ಯೂಸ್

ಮಂಗಳೂರಿನ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತಿನ ದೈವ ಕಾಂತೇರಿ ಜುಮಾದಿ ದೈವಸ್ಥಾನದ ಆರಾಧನೆಗೆ ಅವಕಾಶವನ್ನು ನಿರಾಕರಿಸಿದ ಎಂಎಸ್‌ಇಝಡ್ ಅಧಿಕಾರಿಗಳ ನಡೆಗೆ ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಮಗೆ ಅಭಿವೃದ್ಧಿ ಬೇಕು ನಿಜ, ಹಾಗಂತ ಈ ನೆಲದ ಆಚರಣೆಗಳಿಗೆ ಕೊಡಲಿ ಏಟು ಹಾಕುವುದು ಎಷ್ಟು ಸರಿ? ಅಧಿಕಾರಿಗಳ ಈ ವರ್ತನೆ ತುಳುನಾಡಿನ ದೈವ ಪರಂಪರೆಯ ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಂತಿದ್ದು ಅದನ್ನು ಸಹಿಸಲು ಸಾಧ್ಯವೇ ಇಲ್ಲ....
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಾಸ್ತವಗಳ ಹಿಂದಿನ ಅಂತಿಮ ಸತ್ಯ ತಿಳಿಯುವುದೇ ನಾರಾಯಣಗುರುಗಳ ಗುರಿಯಾಗಿತ್ತು : ಕೇಶವ ಶಾಂತಿ ನಾಟಿ-ಕಹಳೆ ನ್ಯೂಸ್

ಬಂಟ್ವಾಳ : ವಾಸ್ತವಗಳ ಹಿಂದಿನ ಅಂತಿಮ ಸತ್ಯ ತಿಳಿಯುವುದೇ ನಾರಾಯಣಗುರುಗಳು ಗುರಿಯಾಗಿತ್ತು, ಕೇವಲ ಸತ್ಯವಲ್ಲ ಅಂತಿಮ‌ ಸತ್ಯ, ಇದಕ್ಕಾಗಿ ಗುರುಗಳು ಸಾಧು ಸಂತರನ್ನು ವಿದ್ವಾಂಸರನ್ನು, ಯೋಗಿಗಳನ್ನು ಬೇಟಿಯಾದರು, ಆ ಮೂಲಕ ಶೋಷಿತ ವರ್ಗದಲ್ಲಿ ನವ ಚೈತನ್ಯ ಮತ್ತು ಜಾಗೃತಿ ಮೂಡಿಸಿದರು ಎಂದು ಏರಮಲೆ ಕಾಡೆದಿ ಶ್ರೀ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೇಶವ ಶಾಂತಿ ತಿಳಿಸಿದರು. ಇವರು ಬಂಟ್ವಾಳ ಯುವವಾಹಿನಿ ಘಟಕದ ಸದಸ್ಯರಾದ ಅಮಿತಾ ಉಮೇಶ್ ಕೈಕುಂಜೆ ಇವರ ಮನೆಯಲ್ಲಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಖ್ಯಾತ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ -ಕಹಳೆ ನ್ಯೂಸ್

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ಕುಟುಂಬ ಸಹಿತ ಗುರುವಾರ ಸಂಜೆ ಭೇಟಿ ನೀಡಿದರು. ಅವರ ಕುಟುಂಬದ ಮನೆ ನಿಡ್ಡೋಡಿಯಲ್ಲಿ ಇರುವುದರಿಂದ ವಿಶೇಷ ಸಂದರ್ಭದಲ್ಲಿ ಮನೆಗೆ ಬರುತ್ತಿದ್ದು, ಆಗ ಕಟೀಲು ದೇಗುಲಕ್ಕೂ ಭೇಟಿ ನೀಡುತ್ತಿರುತ್ತಾರೆ. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ ಮತ್ತಿತತರು ಉಪಸ್ಥಿತರಿದ್ದರು....
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ನಿಮ್ಮ ಬದುಕಿನ ಯಶಸ್ಸಿಗೆ ನಾವು ದಾರಿಯನ್ನು ತೋರಿಸಬಹುದಷ್ಟೇ ಆದರೆ ನಿಮ್ಮ ಗುರಿಯನ್ನು ನೀವೇ ಮುಟ್ಟಬೇಕು- ವಿಜಯ್ ಕುಮಾರ್.ಕೆ-ಕಹಳೆ ನ್ಯೂಸ್

ಪುತ್ತೂರು. ಫೆ. 28: ನಿಮ್ಮ ಬದುಕಿನ ಯಶಸ್ಸಿಗೆ ನಾವು ದಾರಿಯನ್ನು ತೋರಿಸಬಹುದಷ್ಟೇ ಆದರೆ ನಿಮ್ಮ ಗುರಿಯನ್ನು ನೀವೇ ಮುಟ್ಟಬೇಕು. ಯಾರು ಜೊತೆಯಾಗಿ ಬಂದು ಗುರಿ ತಲುಪಿಸುವುದಿಲ್ಲ. ಹೀಗಾಗಿ ಹಿರಿಯರು ಕೊಟ್ಟ ಮಾರ್ಗದರ್ಶನವನ್ನು ಅನುಸರಿಸಿ ಯಶಸ್ಸುಗಳಿಸಿ ಎಂದು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್ ವಿಜಯ್ ಕುಮಾರ್. ಕೆ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಟ್ರೈನಿಂಗ್ ಆ್ಯಂಡ್ ಪ್ಲೇಸ್‌ಮೆಂಟ್ ಸೆಲ್, ಐಕ್ಯೂಎಸಿ ವತಿಯಿಂದ &quoಣ;ಯಶಸ್ವಿ ಭವಿಷ್ಯಕ್ಕಾಗಿ...
1 197 198 199 200 201 740
Page 199 of 740