ಗ್ರಾಮಸ್ಥರು ಭಾಗವಹಿಸದೆ ಇರುವ ಗ್ರಾಮಸಭೆ ಅಪೂರ್ಣ ಗ್ರಾಮ ಸಭೆ- ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ -ಕಹಳೆ ನ್ಯೂಸ್
ಬಂಟ್ವಾಳ: ಗ್ರಾಮಸ್ಥರು ಭಾಗವಹಿಸದೆ ಇರುವ ಗ್ರಾಮಸಭೆ ಅಪೂರ್ಣ ಗ್ರಾಮ ಸಭೆ, ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು. ಅವರು ಸೋಮವಾರ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರೋಟರಿ ಸಭಾ ಭವನದಲ್ಲಿ ನಡೆದ ನರಿಕೊಂಬು ಹಾಗೂ ಶಂಬುರು ಗ್ರಾಮಗಳನ್ನು ಒಳಗೊಂಡ ನರಿಕೊಂಬು ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮಸ್ಥರಿಗೆ ವಿವಿಧ ಇಲಾಖೆಗಳ ಮಾಹಿತಿ ನೀಡುವ ಸಲುವಾಗಿ ಎಲ್ಲಾ ಇಲಾಖೆಗಳು ಹಾಜರಿದ್ದರು...







