ಲಿವರ್ ಸಮಸ್ಯೆಯಿಂದ ಬಳಲುತ್ತಿರುವ 6 ತಿಂಗಳ ಹಸುಗೂಸಿನ ತುರ್ತು ಚಿಕಿತ್ಸೆಗೆ ಬೇಕಿದೆ ಮಾನವೀಯ ನೆರವು -ಕಹಳೆ ನ್ಯೂಸ್
ತೆಕ್ಕಟ್ಟೆ : ಇಲ್ಲಿನ ಕುಂದಾಪುರ ತಾಲೂಕಿನ ಬೇಳೂರು ಮೊಗೆಬೆಟ್ಟು ಪ್ರಭಾಕರ ಆಚಾರ್ಯ ಹಾಗೂ ಯಶೋಧ ದಂಪತಿಗಳ 6 ತಿಂಗಳ ಹಸುಗೂಸು ಆರ್ವಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ಅಲ್ಲಿಯ ವೈದ್ಯಾಽಕಾರಿಗಳು ತುರ್ತಾಗಿ ಲಿವರ್ ಮರುಜೋಡಣೆಯ ಚಿಕಿತ್ಸೆಗೆ (liver trans plantation) ಸೂಚಿಸಿದ್ದಾರೆ. ಮರುಜೋಡಣೆಯ ಚಿಕಿತ್ಸೆಯ ಅಂದಾಜು ವೆಚ್ಚ ರೂ.25ಲಕ್ಷ ತಗಲುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಈ ಬಡ...







