Recent Posts

Sunday, April 26, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು:ವಾರ್ಡ್ ಸಂಖ್ಯೆ 20 ನೇ ತಿರುವೈಲು ಮೆಂಡೋನ್ಸಾ ಗಾರ್ಡನ್ ನ ಎಲ್ಲಾ ಒಳ ರಸ್ತೆಗಳ ಕಾಂಕ್ರಿಟೀಕರಣ ಉದ್ಘಾಟನೆ-ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 20 ನೇ ತಿರುವೈಲು ಮೆಂಡೋನ್ಸಾ ಗಾರ್ಡನ್ ನ ಎಲ್ಲಾ ಒಳ ರಸ್ತೆಗಳ ಕಾಂಕ್ರಿಟೀಕರಣ, ಒಳ ಚರಂಡಿ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ( ಅಂದಾಜು ವೆಚ್ಚ 85 ಲಕ್ಷ ರೂಪಾಯಿ ) ನಡೆಸಲಾಯಿತು. ಈ ರಸ್ತೆಯ ಉದ್ಘಾಟನೆಯನ್ನು ನಮ್ಮ ನೆಚ್ಚಿನ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ನೆರವೇರಿಸಿದರು.

ಈ ಸಂದರ್ಭ ಮಹಾನಗರ ಪಾಲಿಕೆ ಸದಸ್ಯರಾದ ಹೇಮಲತಾ ರಘು ಸಾಲಿಯಾನ್, ಭಾಸ್ಕರ್ ಕೆ, ಜೇಮ್ಸ್ ಮೆಂಡೋನ್ಸಾ, ರೋಹನ್ ಪಿರೇರಾ ಹಾಗೂ ಭಾರತೀಯ ಜನತಾ ಪಾರ್ಟಿಯ ಅನಿಲ್ ಕುಮಾರ್ ರೈ, ವಾರ್ಡ್ ಅಧ್ಯಕ್ಷರಾದ ರವಿರಾಜ್, ಬೂತ್ ಅಧ್ಯಕ್ಷರುಗಳಾದ ಚರಣ್ ರಾಜ್, ಗುರುಪ್ರಸಾದ್, ಸತೀಶ್, ಪ್ರಣಮ್ ಶೆಟ್ಟಿ, ಹರೀಶ್, ಶೇಖರ, ಗಣೇಶ್, ಚೇತನ್, ಕಿಶೋರ್ ಕುಮಾರ್, ಹರೀಶ್ ದಿವ್ಯಜೋತಿ, ಸುರೇಂದ್ರ ಬಂಗೇರ, ಧನಂಜಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು