Recent Posts

Tuesday, May 5, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ದಾದಿಯರು ದೇಹ ಕಾಯುವ ಸೈನಿಕರು – ಡಾ. ಗೋಪಾಲಕೃಷ್ಣ-ಕಹಳೆ ನ್ಯೂಸ್

ಉಜಿರೆ : ಅಂತರಾಷ್ಟ್ರೀಯ ದಾದಿಯರ ದಿವಸವನ್ನು ಪ್ರತಿ ವರ್ಷ ಮೇ 12 ನೇ ದಿನಾಂಕದಂದು ಜಗತ್ತು ಕಂಡ ಅತ್ಯುತ್ತಮ ದಾದಿ ಫ್ಲೋರೆನ್ಸ್ ನೈಟಿಂಗೇಲ್ ಸ್ಮರಣಾರ್ಥ ಆಚರಿಸಿ ಅವರನ್ನು ನೆನಪಿಸಿಕೊಳ್ಳುವುದು ವೈದ್ಯಕೀಯ ಕ್ಷೇತ್ರದ ಪರಂಪರೆ . ಅದೇ ರೀತಿ ಪ್ರತಿ ವರ್ಷ ಉಜಿರೆ ಬೆನಕ ಸೆಂಟರ್ (NABH ಪುರಸ್ಕೃತ ) ನಲ್ಲಿ ದಾದಿಯರ ದಿನಾಚರಣೆ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ನಡೆದ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ತುಳುನಾಡಿನ ದ್ರಾವಿಡ ಪರಂಪರೆಯ ಮೂಲ ನಿಯಮದಂತೆ ಇರುವೈಲ್ ಮೂಡಯಿಬೆಟ್ಟು ಬಿಲ್ಲವ ಸಮುದಾಯದ ಬಂಗೇರ ಕುಟುಂಬಸ್ಥರ ದೈವಗಳ ತರವಾಡು ಮನೆ ” ಸಿರಿಮುಡಿಯ “ಗೃಹಪ್ರವೇಶ- ಕಹಳೆ ನ್ಯೂಸ್

ಮಂಗಳೂರು: ಅನಾವಶ್ಯಕ ಖರ್ಚುಗಳಿಲ್ಲದೇ ಆಡಂಭರ ರಹಿತ ಸರಳ ಆರಾಧನೆ ಯೊಂದಿಗೆ, ಪ್ರಾಕೃತಿಕ ವಸ್ತುಗಳನ್ನೇ ಬಳಸಿ ದೈವಾರಾಧನೆಯ ಮೂಲ ನಿಯಮದಂತೆ ಇರುವೈಲು ಮೂಡಾಯಿಬೆಟ್ಟು ಬಂಗೇರ ಕುಟುಂಬಿಕರ ತರವಾಡು ಮನೆ `ಸಿರಿಮುಡಿ' ಗೃಹಪ್ರವೇಶ ಅರ್ಥಪೂರ್ಣವಾಗಿ ಜರಗಿತು. ಬಂಗೇರ ಕುಟುಂಬಸ್ಥರ ತರವಾಡು ಮನೆ ಗತ ಕಾಲದ ವೈಭವ ದಂತೆ ವಾಸ್ತುಪ್ರಕಾರ ಆಯಬದ್ಧವಾಗಿ ನಿರ್ಮಾಣಗೊಂಡು ಮನೆಯ ಗೃಹಪ್ರವೇಶ ಅವೈದಿಕವಾಗಿ ನಡೆಯಿತು. ದೈವಗಳ ಚಾವಡಿ ಪ್ರವೇಶ, ದಾಸಯ್ಯರಿಂದ ಮುಡಿಪು, ಪ್ರೇತರಾಧನೆ ಇತ್ಯಾದಿ ಕುಟುಂಬ ಸಂಬAಧಿತ ಕಾರ್ಯಕ್ರಮಗಳೆಲ್ಲವೂ ಪೂರ್ವನಿಯಮದ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಬುದ್ಧಿಯಿಂದ ಬರೆಯುವುದು ಪರೀಕ್ಷೆ, ಹೃದಯದಿಂದ ಬರೆಯುವುದು ಬದುಕು; ಡಾ. ಶ್ರೀಶ ಕುಮಾರ -ಕಹಳೆ ನ್ಯೂಸ್

ಪುತ್ತೂರು ; ವಿವೇಕಾನಂದರು ಬದುಕುವ ಬದುಕಿಸುವ ದಾರಿ ತೋರಿಸಿಕೊಟ್ಟವರು. ಏಕವಚನದ ಕಡೆಯಿಂದ ಬಹುವಚನದ ಕಡೆಗೆ ನಾವು ಸಾಗಬೇಕಿದೆ. ಬುದ್ಧಿಯಿಂದ ಬರೆಯುವುದು ಪರೀಕ್ಷೆ, ಹೃದಯದಿಂದ ಬರೆಯುವುದು ಬದುಕು. ಜಗತ್ತೇ ನನ್ನ ಮನೆ ಎಂದು ಬದುಕಿದಾಗ, ವಸುಧೈವ ಕುಟುಂಬಕಂ ಎನ್ನುವುದು ಸಾಕಾರಗೊಳ್ಳುತ್ತದೆ ಎಂದು ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಬಿ ಸಿ ರೋಡ್ ವಲಯದ ವತಿಯಿಂದ ಗಾಣದಕೋಡಿ ಕುಟುಂಬ ಚಾವಡಿಯಲ್ಲಿ ಭಜನಾ ತರಬೇತಿ ಶಿಬಿರದ ಸಮರೋಪ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ ಮಕ್ಕಳಿಗೆ ಸಂಸ್ಕಾರ ಮೂಡಿಸುವಲ್ಲಿ ಭಜನಾ ಶಿಬಿರ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ಹೇಳಿದರು. ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಬಿ ಸಿ ರೋಡ್ ವಲಯದ ವತಿಯಿಂದ ನಡೆದ ಒಂದು ವಾರ ನಡೆದ ಭಜನಾ ತರಬೇತಿ ಶಿಬಿರದ ಸಮಾರೋಪ...
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಮುಖ್ಯ-ಗವರ್ನರ್ ಗೆಹ್ಲೋಟ್‌;‌ಅದ್ದೂರಿ ರಜತ ಸಂಭ್ರಮ -ಕಹಳೆ ನ್ಯೂಸ್

ಮಂಗಳೂರು: ನಿರಂತರವಾಗಿ 25 ವರ್ಷಗಳ ಕಾಲ ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಪ್ರವರ್ತಿತ ನವೋದಯ ಸ್ವಸಹಾಯ ಗುಂಪುಗಳನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಸ್ತ್ರೀಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಈ ಕಾಯಕದ ರೂವಾರಿಯಾದ ಎಂಎನ್‌ ರಾಜೇಂದ್ರ ಕುಮಾರ್‌ ಅವರನ್ನು ಅಭಿನಂದಿಸುತ್ತೇನೆ. ದೇಶದಲ್ಲಿನ ಈ ಯುದ್ಧ ಸನ್ನಿವೇಶದಲ್ಲಿ ನಾವೆಲ್ಲ ಹೇಗೆ ಒಗ್ಗಟ್ಟಾಗಿದ್ದೇವೆಯೋ ಅದೇ ರೀತಿ ಸಹಕಾರಿ ಕ್ಷೇತ್ರದಲ್ಲೂ ಒಗ್ಗಟ್ಟು ಮುಖ್ಯ ಎಂದು ರಾಜ್ಯಪಾಲ ಡಾ.ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದರು. ಯುದ್ಧ ಸಂಘರ್ಷದ ಈ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಾರಾಯಣಗುರುಗಳು ಮಹಿಳಾ‌ ಸ್ವಾತಂತ್ರ್ಯದ ಬುನಾದಿಗೆ ನೀಡಿದ ಕೊಡುಗೆ ಅಪಾರ : ಶೈಲಜಾ ರಾಜೇಶ್ – ಕಹಳೆ ನ್ಯೂಸ್

ಬಂಟ್ವಾಳ : ನಾರಾಯಣಗುರುಗಳು ಸಾಮಾಜಿಕ ನ್ಯಾಯದ ಸಿದ್ಧಾಂತಗಳು, ಸಮಾನತೆಯ ತತ್ತ್ವಗಳು, ಮತ್ತು ವಿಧ್ಯಾಭ್ಯಾಸ, ಧಾರ್ಮಿಕ ಪ್ರವೇಶ, ಆತ್ಮಗೌರವಕ್ಕಾಗಿ ಮಾಡಿದ ಹೋರಾಟ ಮಹಿಳಾ ಸ್ವಾತಂತ್ರ್ಯದ ಬುನಾದಿಗೆ ಕೊಡುಗೆ ನೀಡಿದವು. ನಾರಾಯಣಗುರು ಅವರ ಚಿಂತನೆಗಳು ಮತ್ತು ಕಾರ್ಯಗಳು ಮಹಿಳಾ ಸ್ವಾತಂತ್ರ್ಯಕ್ಕೆ ಶಕ್ತಿ ಮತ್ತು ಸ್ಫೂರ್ತಿ ನೀಡಿದವು. ಅವರು ರೂಢಿಸಿದ ಮಾನವೀಯ ಮೌಲ್ಯಗಳು ಮತ್ತು ಸಮಾನತೆಯ ಧ್ಯೇಯಗಳು ಮಹಿಳಾ‌ ಸ್ವಾತಂತ್ರ್ಯದ ಬುನಾದಿಯಾಗಿವೆ. ಎಂದು ನ್ಯಾಯವಾದಿ ಶೈಲಜಾ ರಾಜೇಶ್ ತಿಳಿಸಿದರು ಅವರು ಯುವವಾಹಿನಿ ಬಂಟ್ವಾಳ ಘಟಕದ...
ದಕ್ಷಿಣ ಕನ್ನಡಬಂಟ್ವಾಳಮಂಗಳೂರುಸುದ್ದಿ

ಹುತಾತ್ಮ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿದ ಬಜರಂಗದಳದ ರಾಷ್ಟ್ರೀಯ ಸಂಯೋಜಕರಾದ ನೀರಜ್ ಧೋನೆರಿಯಾ – ಕಹಳೆ ನ್ಯೂಸ್

ಮಂಗಳೂರು : ಹುತಾತ್ಮ ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಇಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕರಾದ ನೀರಜ್ ಧೋನೆರಿಯಾ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್‍ನ ಕ್ಷೇತ್ರಿಯ ಪ್ರಮುಖರಾದ ಸೂರ್ಯನಾರಾಯಣ ಜೀ, ಬಜರಂಗದಳ ಪ್ರಾಂತ ಸಂಯೋಜಕರಾದ ಪ್ರಭಂಜನ್ ಸೂರ್ಯ, ಸಹ ಸಂಯೋಜಕರಾದ ಗೋವರ್ಧನ್, ಮಂಗಳೂರು ವಿಭಾಗ ಬಜರಂಗದಳ ಸಂಯೋಜಕರಾದ ಪುನೀತ್ ಅತ್ತಾವರ, ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕರಾದ ಭರತ್ ಕುಮ್ಡೇಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶತರುದ್ರ ಪಾರಾಯಣ – ಕಹಳೆ ನ್ಯೂಸ್

ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೇದ ಸಂವರ್ಧನ ಪ್ರತಿಷ್ಠಾನ, ಪುತ್ತೂರು ಇದರ ವತಿಯಿಂದ ಗಡಿ ಕಾಯುವ ಧೀರ ವೀರ ಸೈನಿಕರಿಗೆ ರಕ್ಷಾ ಕವಚ ಕ್ಕಾಗಿ ವಿಶೇಷ ಶತರುದ್ರ ಪಾರಾಯಣ ನಡೆಯಿತು. ಕಾರ್ಯಕ್ರಮವನ್ನು ದೇವಸ್ಥಾನದ ಅಧ್ಯಕ್ಷ ಶ್ರೀ ಪಂಜಿಗುಡ್ಡ ಈಶ್ವರ ಭಟ್ ಮತ್ತು ಭೂ ಸೇನೆಯ ಹಿರಿಯ ನಿವೃತ್ತ ಅಧಿಕಾರಿ ಶ್ರೀ ಕರ್ನಲ್ ಜಿ ಡಿ ಭಟ್ ದೀಪ ಬೆಳಗಿ ಉದ್ಘಾಟಿಸಿದರು....
1 137 138 139 140 141 727
Page 139 of 727