Recent Posts

Tuesday, May 5, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲದ ಯುವಕ – ಯುವತಿಯರೇ ಇವನ ಫೋಟೋ ಒಮ್ಮೆ ನೋಡಿ..!! ಹುಷಾರಾಗಿರಿ..!! ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲೇ ಮಾದಕ‌ವಸ್ತು ಸೇವಿಸಿ ತಿರುಗಾಡುತ್ತಿದ್ದ ಕೊಳ್ನಾಡು ಸಿವಾಸಿ ಮಹಮ್ಮದ್ ಅಸ್ಬೀರ್ ಹೆಡೆಮುರಿಕಟ್ಟಿದ ಪೋಲೀಸರು..!! – ಕಹಳೆ ನ್ಯೂಸ್

ವಿಟ್ಲ : ಮೇ  3 ರಂದು ಮಧ್ಯಾಹ್ನ, ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ಅವರು ಸಿಬ್ಬಂದಿಗಳೊಂದಿಗೆ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ KA-19-HX-0497 ಸಂಖ್ಯೆಯ ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸದೇ ಬಂದ ಸವಾರನನ್ನು ಪೊಲೀಸರು ತಡೆದರು.

ತಪಾಸಣೆ ವೇಳೆ ಆರೋಪಿತನು ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅತನ ವರ್ತನೆಯಿಂದ ಮಾದಕವಸ್ತು ಸೇವನೆ ಮಾಡಿರುವ ಬಗ್ಗೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದರು.

ಈ ವೇಳೆ ಆತನು ಬಂಟ್ವಾಳ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಎಂದು ತಿಳಿದುಬಂದಿದ್ದು, ತಾನು ಮಾದಕವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಮಾದಕವಸ್ತು ಸೇವನೆ ದೃಢಪಟ್ಟಿದೆ.